ಬೆಂಗಳೂರು:ಮಂಗಳೂರಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಐಟಿಐ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಇದೇ ಕಾಲೇಜನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸುವ ಚಿಂತನೆ ಗೃಹ ಇಲಾಖೆ ಮುಂದಿತ್ತು. ಹೀಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದೇ ಮೊದಲ ಬಾರಿಗೆ ವೃತ್ತಿಪರ ಕಾಲೇಜು ಖೈದಿಗಳ ಭವಿಷ್ಯಕ್ಕಾಗಿ ದಾರಿ ತೋರಿಸಿದಂತಾಗಿದೆ.
ಸರ್ಕಾರದ ಮಾನ್ಯತೆ ಅಡಿ ಐಟಿಐ ಕಾಲೇಜು ಸ್ಥಾಪಿಸಲು ನಿರ್ಧರಿಸಿದ್ದು, ಖೈದಿಗಳ ಕೈಗೆ ಕಾಯಕದ ಸ್ಪರ್ಶ ನೀಡಲಿದೆ. ಮೊದಲ ಹಂತವಾಗಿ 6 ತಿಂಗಳ ಅಲ್ಪಾವಧಿ ಕೋರ್ಸ್, ಎರಡು ವರ್ಷಗಳ ವೃತ್ತಿ ಶಿಕ್ಷಣ ಸಂಬಂಧಿ ಕೋರ್ಸ್‌ಗಳನ್ನು (ಐಟಿಐ, ಎಲೆಕ್ಟ್ರಾನಿಕ್ಸ್) ಆರಂಭಿಸಲಾಗುತ್ತದೆ. ಕನಿಷ್ಠ 8ನೇ ತರಗತಿ ಪಾಸಾಗಿರಬೇಕು ಎಂಬ ಮಾನದಂಡ ನಿಗದಿಪಡಿಸಲಾಗಿದೆ.