ಕರ್ನಾಟಕ

karnataka

ETV Bharat / city

ಮಂಗಳಮುಖಿಯರ ಕಷ್ಟಕ್ಕೆ ಮರುಗಿದ ಪೊಲೀಸರು - corona virus phobia

ಆಹಾರ ವಿತರಿಸಿದ ಸಿವಿಲ್ ಡಿಫೆನ್ಸ್ ಮತ್ತು ಪೊಲೀಸ್ ಸಿಬ್ಬಂದಿಗೆ ಹೊಟ್ಟೆಗಿಲ್ಲದೇ ಪರದಾಡುತ್ತಿದ್ದ ಮಂಗಳ ಮುಖಿಯರು ಧನ್ಯವಾದ ಸಲ್ಲಿಸಿದ್ದಾರೆ.

food supply from police to transgender
ಮಂಗಳಮುಖಿಯರ ಕಷ್ಟಕ್ಕೆ ಮರುಗಿದ ಪೊಲೀಸರು

By

Published : Mar 30, 2020, 10:07 PM IST

ಬೆಂಗಳೂರು:ಕೋವಿಡ್-19 ಪರಿಣಾಮ ಯಾವ ರೀತಿ ಇದೆ‌ ಎಂದಾರೆ‌ ಭಿಕ್ಷಾಟನೆ ಮಾಡಿ ಬದುಕುವವರ ಜೀವನ ಡೋಳಾಯಮಾನ ಪರಿಸ್ಥಿತಿಗೆ ತಲುಪಿದೆ‌. ಒಂದು ಹೊತ್ತಿನ ಅನ್ನಕ್ಕೂ ಪರದಾಡುವಂತಾಗಿದೆ.

ಹೀಗಾಗಿ ಅಂತಹವರ ಹಸಿವು ನೀಗಿಸಲು ಕೆಲವೊಂದೆಡೆ ಸಹಾಯವಾಣಿ‌ ಕೇಂದ್ರಗಳು ಕೆಲಸ ನಿರ್ವಹಿಸಿದರೆ ಮತ್ತೊಂದೆಡೆ ಸಿವಿಲ್ ಡಿಫೆನ್ಸ್ ಮತ್ತು ಪೊಲೀಸರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಮಂಗಳಮುಖಿಯರ ಕಷ್ಟಕ್ಕೆ ಮರುಗಿದ ಪೊಲೀಸರು

ಹೆಬ್ಬಾಳದ ರಸ್ತೆಯ ಸಿಗ್ನಲ್​​ಗಳಲ್ಲಿ ನಿತ್ಯದ ಜೀವನಕ್ಕೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು, ಸದ್ಯದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿಗ್ನಲ್​​ಗಳು ವಾಹನ ಸಂಚಾರ ವಿಲ್ಲದೆ ಖಾಲಿ, ಖಾಲಿ ಬಿದ್ದಿವೆ. ಹೀಗಾಗಿ ಮಂಗಳಮುಖಿಯರಿಗೆ ರಸ್ತೆಗೂ ಇಳಿಯಲು ಆಗದಂತಾಗಿದೆ.

ಹೆಬ್ಬಾಳದ ಬಳಿ‌ ಹಸಿವು ತಾಳಲಾರದೇ ಬೀದಿಯಲ್ಲಿದ್ದ ಮಂಗಳಮುಖಿಯರ ಕಷ್ಟಕ್ಕೆ ಸ್ಪಂದಿಸಿದ ಪೊಲೀಸ್ ಮತ್ತು ಸಿವಿಲ್ ಡಿಫೆನ್ಸ್ 20 ದಿನಗಳವರೆಗೂ ಆಗುವ ಆಹಾರ ಸಾಮಗ್ರಿ ನೀಡಿದ್ದಾರೆ.

ABOUT THE AUTHOR

...view details