ಬೆಂಗಳೂರು:ನಗರದ ಹೊಂಗಸಂದ್ರ ವಾರ್ಡ್ನ ಮಂಗಮ್ಮನಪಾಳ್ಯದಲ್ಲಿ ನಿನ್ನೆ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. 654ನೇ ನಂಬರಿನ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಈ ವೇಳೆ ಆತನ ಮನೆಯವರನ್ನೂ ಕ್ವಾರಂಟೈನ್ ಮಾಡಿ ಚೆಕಪ್ಗೆ ಕಳಿಸಲಾಗಿತ್ತು. ಕುಟುಂಬದವರ ಸೋಂಕು ಪತ್ತೆ ಪರೀಕ್ಷೆ ನಡೆದಾಗ ಸೋಂಕಿತ ವ್ಯಕ್ತಿಯ 40 ವರ್ಷದ ಪತ್ನಿ (ಪಿ-677) ಹಾಗೂ 25 ವರ್ಷದ ಮಗನಲ್ಲಿ (P-678) ಕೊರೊನಾ ಸೋಂಕು ದೃಢಪಟ್ಟಿದೆ.
ತಂದೆಯಿಂದಲೇ ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ಗೆ ಸೋಂಕು,ಹೆಚ್ಚಿದ ಆತಂಕ - mangammana palya
ಬೆಂಗಳೂರಿನಲ್ಲಿ ಇಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಡೆಲಿವರಿ ಬಾಯ್ಗೂ ಕೂಡಾ ಸೋಂಕು ತಗುಲಿದ್ದು, ಆತನ ತಂದೆಯ ಜೊತೆಗಿನ ಸಂಪರ್ಕದಿಂದಾಗಿ ಕೊರೊನಾ ಹಬ್ಬಿದೆ.
25 ವರ್ಷದ ಸೋಂಕಿತ ಫ್ಲಿಪ್ ಕಾರ್ಟ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಇದರಿಂದಾಗಿ ಆತನ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಬಹುದೊಡ್ಡ ಕೆಲಸವಾಗಿದೆ. ಬಿಬಿಎಂಪಿ ಪಬ್ಲಿಕ್ ನೋಟಿಸ್ ಕಳಿಸುವ ಸಾಧ್ಯತೆ ಬಗ್ಗೆ ಕೂಡಾ ಚಿಂತಿಸುತ್ತಿದ್ದು, ಯಾರ ಮನೆಗೆಲ್ಲಾ ಆರ್ಡರ್ ಬಂದಿದೆಯೋ ಅವರನ್ನು ಸೆಲ್ಫ್ ಕ್ವಾರಂಟೈನ್ ಅಥವಾ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ತಿಳಿಸುವ ಬಗ್ಗೆ ಚಿಂತನೆ ನಡೆಸ್ತಿದೆ.
ತಂದೆಗೆ ಗುಜರಿ ಅಂಗಡಿಯ ಸೋಂಕಿತ ವ್ಯಕ್ತಿ ಸಂಪರ್ಕದಿಂದ ಕೊರೊನಾ ತಗುಲಿದ್ದು, ತಂದೆಯಿಂದ ಮಗನಿಗೆ ಈ ಸೋಂಕು ಹರಡಿದೆ. ಸದ್ಯ ಆತನ ಮಗಳು ಸೋಂಕಿನಿಂದ ಬಚಾವಾಗಿದ್ದಾಳೆ. ಜೊತೆಗೆ ಮನೆ ಮಾಲೀಕನ ಮನೆಯಲ್ಲಿದ್ದ ಐವರನ್ನೂ ಕೂಡಾ ಕ್ವಾರಂಟೈನ್ ಮಾಡಿದ್ದು, ಸೋಂಕು ಪತ್ತೆ ಪರೀಕ್ಷೆಯ ರಿಪೋರ್ಟ್ ಬರುವುದು ಬಾಕಿಯಿದೆ.