ಬೆಂಗಳೂರು:ಎಫ್‍ಕೆಸಿಸಿಐ( ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ) ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಮತ್ತು ಹಿರಿಯ ಉಪಾಧ್ಯಕ್ಷ ಡಾ. ಐ.ಎಸ್.ಪ್ರಸಾದ್, ಉಪಾಧ್ಯಕ್ಷ ಬಿ.ವಿ ಗೋಪಾಲ್ ರೆಡ್ಡಿ ಹಾಗೂ ಬ್ಯಾಂಕಿಂಗ್ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ಪ್ರಭುದೇವ್ ಆರಾಧ್ಯ, ಭಾರತ ಸರ್ಕಾರದ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರವನ್ನು ಬೆಂಗಳೂರಿನಲ್ಲಿ ಸಲ್ಲಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಎಂಎಸ್‍ಎಂಇ ವಲಯವನ್ನು ಸುಧಾರಿಸಲು ಮತ್ತು ಕಾರ್ಪೋರೇಟ್ ವ್ಯವಹಾರಗಳಲ್ಲಿನ ಕಾರ್ಯವಿಧಾನಗಳಲ್ಲಿ ಸುಧಾರಣೆಗಳನ್ನು ತರಲು ಹಲವು ವಿಷಯಗಳ ಕುರಿತು ಚರ್ಚಿಸಿದರು.
ಕೆಲವು ವರ್ಷಗಳವರೆಗೆ ಎಂಎಸ್‍ಎಂಇಗಳಿಗಾಗಿ ಎನ್‍ಪಿಎ ಮಾನದಂಡಗಳ ಅನ್ವಯ ಮುಂದೂಡಿಕೆ, ಎಂಎಸ್‍ಎಂಇಗಳಿಗೆ ಎರಡು ವರ್ಷಗಳ ಅವಧಿಗೆ ಸಿಬಿಲ್ ರೇಟಿಂಗ್ ಅನ್ನು ಮುಂದೂಡುವುದು, ಹೊಸ ಸಾಲಗಳನ್ನು ಮಂಜೂರು ಮಾಡಲು ಮತ್ತು ಅಸ್ತಿತ್ವದಲ್ಲಿರುವ ಸಾಲಗಳ ವರ್ಧನೆ ಪ್ರಕ್ರಿಯಾ ಶುಲ್ಕವನ್ನು ಮನ್ನಾ ಮಾಡುವುದು, ಹೆಚ್ಚುವರಿ ಸಾಲಕ್ಕೆ ಹೆಚ್ಚುವರಿ ಭದ್ರತೆಗೆ ಒತ್ತಾಯಿಸದಿರುವುದು, ಈ ರೀತಿ ಹಲವು ಬೇಡಿಕೆಗಳನ್ನು ವಿತ್ತ ಸಚಿವೆಯ ಎದುರು ಇಟ್ಟರು.
ಆರ್ಥಿಕ ಕ್ಷೇತ್ರಗಳಾದ ಗಾರ್ಮೆಂಟ್ಸ್, ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಅತಿಥ್ಯ, ಶಿಕ್ಷಣ ಸಂಸ್ಥೆಗಳು, ವೃತ್ತಿಪರ ಸೇವೆಗಳಿಗೆ ಆರ್ಥಿಕ ಉತ್ತೇಜನ ನೀಡುವುದು. ದೈನಂದಿನ ಅಗತ್ಯಗಳಿಗೆ ಅಗತ್ಯವಾದ ಸರಕುಗಳ ಮೇಲಿನ ಜಿಎಸ್‍ಟಿಯನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರ ದರವನ್ನು ತಗ್ಗಿಸುವುದು, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ಅಡಿಯಲ್ಲಿ ತರುವುದು, ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ರಚಿಸಿ ಪ್ರಮುಖ ಬ್ಯಾಂಕುಗಳಲ್ಲಿ ಮತ್ತು ಪಿಎಸ್‍ಯುಗಳ ಮಂಡಳಿಗಳಲ್ಲಿ ಎಫ್‍ಕೆಸಿಸಿಐಗೆ ಪ್ರಾತಿನಿಧ್ಯವನ್ನು ಒದಗಿಸುವುದು. ಕಾರ್ಪೋರೇಟ್ ವ್ಯವಹಾರಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಲು ಈ ಕೆಳಗಿನ ವಿಷಯಗಳ ವಿನಂತಿಯನ್ನು ಸಲ್ಲಿಸಿದರು.