ಕರ್ನಾಟಕ

karnataka

ETV Bharat / city

ಯುಕೋ ಬ್ಯಾಂಕ್​ ಕಟ್ಟಡದಲ್ಲಿ ಅಗ್ನಿ ಅವಘಡ... 200 ಮಂದಿ ಪ್ರಾಣ ಉಳಿಸಿದ್ದೇ ಈ ಮೂವರು ಆಪದ್ಭಾಂಧವರು

ಎಂ.ಜಿ.ರಸ್ತೆಯ ಯುಕೋ ಬ್ಯಾಂಕ್​ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಆಗಬಹುದಾಗಿದ್ದ ಭಾರಿ ಅನಾಹುತವನ್ನು ಕೇವಲ‌ ಮೂವರು ಸಿಬ್ಬಂದಿ ತಡೆಯುವುದಲ್ಲದೆ, ಸುಮಾರು 200 ಜನರ ಪ್ರಾಣವನ್ನು‌ ಕಾಪಾಡಿದ್ದಾರೆ.

ಯುಕೋ ಬ್ಯಾಂಕ್​ ಕಟ್ಟಡದಲ್ಲಿ ಅಗ್ನಿ ಅವಘಡ ಪ್ರಕರಣ..200 ಜನರ ಪ್ರಾಣ ಉಳಿಸಿದ 3 ಜೀವ ರಕ್ಷಕರು..!

By

Published : Sep 18, 2019, 11:36 PM IST

ಬೆಂಗಳೂರು:ಎಂ.ಜಿ.ರಸ್ತೆಯ ಯುಕೋ ಬ್ಯಾಂಕ್​ ಇರುವ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕಟ್ಟಡದಲ್ಲಿದ್ದ ಸುಮಾರು 200 ಜನರ ಪ್ರಾಣವನ್ನು ಮೂವರು ಸೆಕ್ಯೂರಿಟಿ ಸಿಬ್ಬಂದಿ ಉಳಿಸುವ ಮೂಲಕ ಆಪದ್ಭಾಂಧವರೆನಿಸಿದ್ದಾರೆ.

ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಫರಾ ಟವರ್​ನಲ್ಲಿ ಯುಕೋ ಬ್ಯಾಂಕ್, ಕಮರ್ಷಿಯಲ್​ ಕಚೇರಿ, ಇತರೆ ಕಚೇರಿಗಳು ಸೇರಿ ಒಟ್ಟು ಆರು ಅಂತ್ತಸಿನ ‌ಕಟ್ಟಡ ಇದಾಗಿದೆ. ಮೊದಲ‌ ಮಹಡಿಯಲ್ಲಿ ಹಾಕಲಾಗಿದ್ದ ಎಲೆಕ್ಟ್ರಾನಿಕ್ ಪ್ಯಾನೆಲ್​ನಲ್ಲಿ ವೈರಿಂಗ್ ವ್ಯತ್ಯಾಸದಿಂದ ಅಗ್ನಿ ಅವಘಡ ಉಂಟಾಗಿತ್ತು. ನೋಡು ನೋಡುತ್ತಿದ್ದಂತೆ ಬೆಂಕಿ‌ ಕಿಡಿ ವ್ಯಾಪಿಸಿತ್ತು. ಬ್ಯಾಂಕ್​ನಲ್ಲಿದ್ದ ಸಿಬ್ಬಂದಿ ಆತಂಕದಿಂದ ಹೊರಬಂದಿದ್ದರು.‌ ಯುಕೋ ಬ್ಯಾಂಕ್ ಕಟ್ಟಡದಲ್ಲಿ ಯಾವುದೇ ಅಗ್ನಿ ಸುರಕ್ಷತಾ ವಸ್ತುಗಳಿರಲಿಲ್ಲ ಎಂದು ಹೇಳಲಾಗ್ತಿದೆ.

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಯುಕೊ ಬ್ಯಾಂಕ್​ ಕಟ್ಟಡದಲ್ಲಿ ಅಗ್ನಿ ಅವಘಡ

ಸೆಕ್ಯೂರಿಟಿಗಳು ಸಮಯಪ್ರಜ್ಞೆ ಮೆರೆದಿದ್ದೇಗೆ:

ಕೇಬಲ್​ಗಳ ಮುಖಾಂತರ ಬೆಂಕಿ ನೆಲ ‌ಮಹಡಿಯಿಂದ ವ್ಯಾಪಿಸುತ್ತಿದ್ದುದನ್ನು ಕಂಡ ಸೆಕ್ಯೂರಿಟಿ ಗಾರ್ಡ್ ಸಿಂಗ್, ಆನಂದ್ ಮತ್ತು ಮೌಲಾನ ಅಲಿ ಎಂಬುವರು ಕೂಡಲೇ ತಾವು ಕೆಲಸ ಮಾಡುವ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸುಮಾರು 25 ಅಗ್ನಿನಂದಕಗಳಿಂದ ಹೊತ್ತಿ ಉರಿಯುತ್ತಿದ್ದ ಅಗ್ನಿಯನ್ನು ನಂದಿಸಿದ್ದಾರೆ. ಈ ಮೂಲಕ ಸುಮಾರು 200 ಮಂದಿಯ ಪ್ರಾಣ ಉಳಿಸಿದ್ದಾರೆ.

ABOUT THE AUTHOR

...view details