ಬೆಂಗಳೂರು :ಕೊಟ್ಟಿರುವ ಸಾಲ ಕೇಳಿದ ಅಂತಾ ಎಣ್ಣೆ ಏಟಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ತಳ್ಳಿ ಕೊಲೆ ಮಾಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ನಡೆದಿರೋ ಜಗಳದಲ್ಲಿ ಸುಬ್ರಮಣಿ ಎಂಬಾತನನ್ನು ಆತನ ಸ್ನೇಹಿತರಾದ ನಾಗರಾಜ್ ಮತ್ತು ವಸಂತ್ ಎಂಬುವರು ಕೊಲೆ ಮಾಡಿದ್ದಾರೆ.
ಕೊಲೆಯಾದ ಸುಬ್ರಮಣಿ ಆರೋಪಿಗಳಾದ ನಾಗರಾಜ್ ಮತ್ತು ವಸಂತ್ ಕಳೆದ ಹತ್ತಾರು ವರ್ಷಗಳಿಂದಲೂ ಗೆಳೆಯರು. ಮೂವರೂ ವೃತ್ತಿಯಲ್ಲಿ ಟೈಲರ್ಗಳಾಗಿದ್ದರು. ಆಗಾಗ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ನಿನ್ನೆಯೂ ಅದೇ ರೀತಿ ಪಾರ್ಟಿ ಮಾಡಿದ್ದಾರೆ.