ಕರ್ನಾಟಕ

karnataka

ETV Bharat / city

ಶಿಕ್ಷಕರ ಕ್ಷೇತ್ರದ ಚುನಾವಣೆ ಮುನ್ನವೇ ಸಾಕಷ್ಟು ಅಕ್ರಮ: ಉಗ್ರಪ್ಪ ಆರೋಪ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಒಂದೊತ್ತಿನ ಬಾಡೂಟದ ಜೊತೆಗೆ ಮದ್ಯದ ಆಮಿಷವೊಡ್ಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

Even before the election of the teachers constituency is quite illegal
ಮಾಜಿ ಸಂಸದ ವಿ.ಎಸ್.ಉಗ್ರಪ್ಪ

By

Published : Feb 24, 2020, 8:41 PM IST

ಬೆಂಗಳೂರು:ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಒಂದೊತ್ತಿನ ಬಾಡೂಟದ ಜೊತೆಗೆ ಮದ್ಯದ ಆಮಿಷವೊಡ್ಡಿದ್ದಾರೆ. ಮತದಾರರ ಮೇಲೆ ಕೀಳು ಮಟ್ಟದ ಪ್ರಭಾವ ಬಳಸಿ ಚುನಾವಣೆಯನ್ನು ಗೆಲ್ಲಲು ತಯಾರಿ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸದಸ್ಯರು ಕಳೆದ ಮೂರು ಅವಧಿಗಳಲ್ಲಿ ಶಿಕ್ಷಕರಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ, ಈ ಚುನಾವಣೆಯಲ್ಲಿ ನಮ್ಮ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷರ ಭಾವಚಿತ್ರಗಳನ್ನು ಬಳಸಿಕೊಂಡು ಶಿಕ್ಷಕರಿಗೆ ಟಿಫನ್ ಬಾಕ್ಸ್, ವಾಚ್, ಪೆನ್...ಸೇರಿದಂತೆ ಉಡುಗೊರೆ ನೀಡಿ ಆಮೀಷವೊಡ್ಡುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸಿದ ಶಿಕ್ಷಕರ ಮತದಾರರ ಪಟ್ಟಿಯಲ್ಲಿ ಹಲವು ಲೋಪ-ದೋಷಗಳು ಕಂಡು ಬಂದಿವೆ. ಆಯೋಗದ ನಿಯಮದ ಪ್ರಕಾರ ಒಬ್ಬ ಶಿಕ್ಷಕರು ಆರು ವರ್ಷಗಳಿಗೆ ಸಂಬಂಧಪಟ್ಟಂತೆ ಮೂರು ವರ್ಷದ ಸೇವಾ ಅನುಭವವನ್ನು ಹೊಂದಿರಬೇಕು. ಆದರೆ, ಆಯೋಗವು ಬಿಡುಗಡೆಗೊಳಿಸಿರುವ ಮತದಾರರ ಪಟ್ಟಿಯಲ್ಲಿ 20-23 ವಯಸ್ಸಿನ ಶಿಕ್ಷಕರನ್ನೂ ಸೇರ್ಪಡೆಗೊಳಿಸಿದೆ. ಜೊತೆಗೆ 61 ವರ್ಷ ಮೇಲ್ಪಟ್ಟವರಿಗೂ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ ಎಂದರು.

ಯಾವುದೇ ರೀತಿಯ ಆಮೀಷಗಳಿಗೆ ಶಿಕ್ಷಕ ಮತದಾರರು ಒಳಗಾಗುವುದಿಲ್ಲ. ಸಮಾಜವನ್ನು ಸುಧಾರಿಸುವ ಶಿಕ್ಷಕರು, ಆಳವಾದ ಚಿಂತನೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿಗಳಿಗೆ ಮುಲಾಜಿಲ್ಲದೇ ತಿರಸ್ಕರಿಸಿ ಈ ಕ್ಷೇತ್ರದಲ್ಲಿ ಹೊಸ ಚಿಂತನೆಗಳಿಗೆ ನಾಂದಿ ಹಾಡುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ABOUT THE AUTHOR

...view details