ಕರ್ನಾಟಕ

karnataka

ETV Bharat / city

ಇಂದು ED ಕೋರ್ಟ್ ಜಾಮೀನು ತೀರ್ಪು ಹಿನ್ನೆಲೆ: ದೆಹಲಿಗೆ ತೆರಳಿದ ಡಿಕೆಶಿ

ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದ್ದು, ಅಂತಿಮ ತೀರ್ಪನ್ನು ಇಂದು ಇಡಿ ಕೋರ್ಟ್ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.

KPCC President D.K. Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : Aug 2, 2022, 11:01 AM IST

ಬೆಂಗಳೂರು: ಇಂದು ಸಂಜೆ ಜಾರಿ ನಿರ್ದೇಶನಾಲಯದ ತೀರ್ಪು ಪ್ರಕಟವಾಗುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಜಾಮೀನು ವಿಚಾರವಾಗಿ ಇಂದು ತೀರ್ಪು ಹೊರಬೀಳಲಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಅಂತಿಮ ತೀರ್ಪನ್ನು ಇಂದು ಇಡಿ ಕೋರ್ಟ್ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಸಂಜೆ ಮೂರು ಗಂಟೆಗೆ ತೀರ್ಪು ಪ್ರಕಟವಾಗಲಿದೆ.

ತೀರ್ಪಿನ ಬಳಿಕ ಡಿಕೆಶಿ ಹುಬ್ಬಳ್ಳಿಗೆ ವಾಪಸ್​ ಆಗಲಿದ್ದು, ಹುಬ್ಬಳ್ಳಿಯಲ್ಲಿ ಇಂದು ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹಾಗಾಗಿ ಇಂದೇ ವಾಪಸ್ ಆಗಲಿದ್ದಾರೆ. ರಾಹುಲ್ ಗಾಂಧಿ ಸಹ ಇಂದು ದೆಹಲಿಯಿಂದ ಹುಬ್ಬಳ್ಳಿಗೆ ನೇರವಾಗಿ ಆಗಮಿಸಲಿದ್ದು, ಅವರೊಂದಿಗೆ ಡಿ.ಕೆ.ಶಿವಕುಮಾರ್ ಸಹ ಬರುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಇದು ಸಾಧ್ಯವಾಗದಿದ್ದರೆ ಅವರು ಪ್ರತ್ಯೇಕವಾಗಿ ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ವಾಪಸಾಗಲಿದ್ದಾರೆ.

ಇದನ್ನೂ ಓದಿ :ಅಕ್ರಮ ಆಸ್ತಿ ಸಂಪಾದನೆ ಪಕ್ರರಣ ರದ್ಧತಿ ಕೋರಿ ಡಿಕೆಶಿ ಹೈಕೋರ್ಟ್ ಮೊರೆ: ಸಿಬಿಐಗೆ ನೋಟಿಸ್

ABOUT THE AUTHOR

...view details