ಕರ್ನಾಟಕ

karnataka

ETV Bharat / city

ರಾಜ್ಯದಲ್ಲೂ ಸ್ಟಾಂಪ್ ಡ್ಯೂಟಿಗೆ ರಿಯಾಯಿತಿ ಕೊಡುವ ಬಗ್ಗೆ ಚಿಂತನೆ: ಸಚಿವ ಆರ್​.ಅಶೋಕ್ - ಕರ್ನಾಟಕ ಲಾಕ್ ಡೌನ್​

ರಾಜ್ಯದಲ್ಲಿ ತಮಿಳುನಾಡು ಮಾದರಿಯಲ್ಲಿ ಸ್ಟಾಂಪ್​ ಡ್ಯೂಟಿಗೆ ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದರು. ಅಲ್ಲದೆ ಲಾಕ್​ಡೌನ್​ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿರುವ ಸಮುದಾಯಕ್ಕೆ ಸಹಾಯಧನ ನೀಡಿದ್ದು, ಮುಂದಿನ ದಿನಗಳಲ್ಲಿ ಉಳಿದ ಸಮುದಾಯಗಳಿಗೂ ಹಣ ನೀಡುವುದಾಗಿ ತಿಳಿಸಿದರು.

discounting-staff-duty-r-ashok-said
ಕಂದಾಯ ಸಚಿವ ಆರ್​ ಅಶೋಕ್

By

Published : May 26, 2020, 4:34 PM IST

ಬೆಂಗಳೂರು: ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಸ್ಟಾಂಪ್ ಡ್ಯೂಟಿಗೆ ರಿಯಾಯಿತಿ ಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ಟಾಂಪ್ ಡ್ಯೂಟಿ ರಿಯಾಯಿತಿ ನೀಡಿವ ಬಗ್ಗೆ ಸುಳಿವು ನೀಡಿದರು. ಅಪಾರ್ಟ್‌ಮೆಂಟ್ ನೋಂದಣಿಗೆ ತಮಿಳುನಾಡು ಸರ್ಕಾರ ರಿಯಾಯಿತಿ ಕೊಟ್ಟಿದ್ದು, ಇಂದು ಸಂಜೆ ಕೃಷ್ಣಾದಲ್ಲಿ ಸಿಎಂ ಜತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಕೊರೊನಾ ಸಂಕಷ್ಟದಲ್ಲಿ ಹಣಕಾಸಿನ ತೊಂದರೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.

ರಾಜ್ಯದಲ್ಲೂ ಸ್ಟಾಂಪ್ ಡ್ಯೂಟಿಗೆ ರಿಯಾಯಿತಿ ಕೊಡುವ ಬಗ್ಗೆ ಚಿಂತನೆ

ಕೊರೊನಾ ನಿಯಂತ್ರಿಸುವಲ್ಲಿ ಬೆಂಗಳೂರು ನಗರ ಸಕ್ಸಸ್ ಆಗಿದೆ. ಕೇಂದ್ರ ಸರ್ಕಾರ ಪ್ರಶಂಸೆ ಮಾಡಿದ್ದು ಖುಷಿ ತಂದಿದೆ. ಇದಕ್ಕೆ ವೈದ್ಯ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿ ಎಲ್ಲಾ ಇಲಾಖೆಗಳ ಶ್ರಮವೂ ಕಾರಣ ಎಂದರು ಹೇಳಿದರು.

ಲಾಕ್​​ಡೌನ್ ಸಡಿಲಿಕೆಯಿಂದಾಗಿ ಹೊರ ದೇಶ ಹಾಗೂ ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ಹಾಗಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ಜನರು ಬರುತ್ತಿದ್ದು, ಕೊರೊನಾ ಸೋಂಕನ್ನು ಹೇಗೆ ತಡೆಗಟ್ಟಬಹುದೆಂದು ಸಮಾಲೋಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವ್ಯಾಯಾಮ ಮಾಡುವ ವಸ್ತುಗಳನ್ನು ಹಲವರು ಮುಟ್ಟುವುದರಿಂದ ಸದ್ಯ ಜಿಮ್ ಆರಂಭಕ್ಕೆ ಅವಕಾಶ ನೀಡಿಲ್ಲ ಎಂದರು. ಎಲ್ಲಾ ಶ್ರಮಿಕ ವರ್ಗಗಳಿಗೂ ಪರಿಹಾರ ಕೊಡುವ ನಿಟ್ಟಿನಲ್ಲಿ ಚರ್ಚೆ ಮಾಡ್ತೇವೆ. ಈಗಾಗಲೇ ಸಿಎಂ‌ ಬಹುತೇಕ ಶ್ರಮಿಕ ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಲಾಕ್​ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳಿಗೆ ಈಗಾಗಲೇ ಸಹಾಯಧನ ಘೋಷಣೆ ಮಾಡಿದ್ದೇವೆ. ನೇಕಾರರು, ಕ್ಷೌರಿಕ ವೃತ್ತಿ ಮಾಡುವವರಿಗೂ ಸಂಕಷ್ಟ ಇತ್ತು. ಆ ಸಮುದಾಯಗಳನ್ನು ಗುರುತಿಸಿದ್ದೇವೆ. ನಮ್ಮ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆಯು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಕೆಲ ಸಮುದಾಯಗಳಿಗೆ ಸಹಾಯಧನ ನೀಡುವ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇವೆ ಎಂದರು.

ABOUT THE AUTHOR

...view details