ಬೆಂಗಳೂರು: ಕೊರೊನಾದಿಂದ ಮೃತಪಟ್ಟ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕುಟುಂಬಗಳಿಗೆ ಮ್ಯಾನ್‍ಕೈಂಡ್ ಫಾರ್ಮಾ ಲಿಮಿಡೆಟ್ ತಲಾ 3 ಲಕ್ಷ ರೂ.ಪರಿಹಾರ ನೀಡಿದ್ದು, ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಮ್ಯಾನ್‍ಕೈಂಡ್ ಫಾರ್ಮಾ ಲಿಮಿಟೆಡ್‍ನ ವಿಭಾಗೀಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಅರೋರಾ ಚೆಕ್ ವಿತರಿಸಿದರು.
ಬಳಿಕ ಡಿಜಿಪಿ ಪ್ರವೀಣ್ ಸೂದ್ ಮಾತನಾಡಿ, ಕೋವಿಡ್‍ನಿಂದ ನಿಧನ ಹೊಂದಿದ ಪೊಲೀಸ್ ಅಧಿಕಾರಿ ಸಿಬ್ಬಂದಿ ಕುಟುಂಬಕ್ಕೆ ಈಗಾಗಲೇ ಸರಕಾರದಿಂದ ತಲಾ 30 ಲಕ್ಷ ರೂ ನೀಡಲಾಗುತ್ತಿದೆ. ಅಲ್ಲದೆ,ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗ ಕೂಡ ಕೊಡಲಾಗುತ್ತಿದೆ. ಈ ಮಧ್ಯೆ ಅಂತಹ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರ ನೆರವಿಗೆ ಧಾವಿಸಿರುವ ಮ್ಯಾನ್‍ಕೈಂಡ್ ಸಂಸ್ಥೆಗೆ ಅಭಿನಂದನೆಗಳು ಎಂದರು.
ಕೋವಿಡ್‌ಗೆ ಬಲಿಯಾದ ಪೊಲೀಸ್ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ವಿತರಣೆ
ಕೋವಿಡ್ ಸಂದರ್ಭದಲ್ಲಿ ಸೋಂಕಿಗೆ ಬಲಿಯಾದ ಪೊಲೀಸ್ ಕುಟುಂಬಗಳಿಗೆ ಮ್ಯಾನ್‍ಕೈಂಡ್ ಫಾರ್ಮಾ ಲಿಮಿಡೆಟ್‌ನಿಂದ ತಲಾ 3 ಲಕ್ಷ ಪರಿಹಾರವನ್ನು ಡಿಜಿಐ ಪ್ರವೀಣ್ ಸೂದ್ ಬೆಂಗಳೂರಿನಲ್ಲಿ ನಿನ್ನೆ ವಿತರಿಸಿದರು.
ಕೋವಿಡ್‌ಗೆ ಬಲಿಯಾದ ಪೊಲೀಸ್ ಸಿಬ್ಬಂದಿ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ವಿತರಣೆ
ಈ ವೇಳೆ ಮಾತನಾಡಿದ ಮ್ಯಾನ್‍ಕೈಂಡ್ ಫಾರ್ಮಾ ಹಿರಿಯ ವ್ಯವಸ್ಥಾಪಕ ಮನೀಶ್ ಅರೋರಾ, ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಮೃತಪಟ್ಟ ಅಧಿಕಾರಿ, ಸಿಬ್ಬಂದಿಗೆ ಸಂಸ್ಥೆಯಿಂದ ಸಣ್ಣ ಸಹಾಯ ಮಾಡುತ್ತಿದ್ದೇವೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 90 ಮಂದಿ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ಸದಸ್ಯರಿಗೆ ತಲಾ ಮೂರು ಲಕ್ಷ ದಂತೆ ಮ್ಯಾನ್‍ಕೈಂಡ್ ಸಂಸ್ಥೆಯಿಂದ 2.70 ಕೋಟಿ ರೂ. ವಿತರಿಸಿತು. ಕಾರ್ಯಕ್ರಮದಲ್ಲಿ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಹಾಗೂ ಇತರರು ಹಾಜರಿದ್ದರು.