ಕರ್ನಾಟಕ

karnataka

ETV Bharat / city

ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ : ನಕಲಿ‌ ಎಸಿಬಿ ಅಧಿಕಾರಿ ವಿರುದ್ಧ ದೂರು

ಕಳೆದ‌ ಮೂರು ದಿನಗಳ ಹಿಂದೆ ಧನಂಜಯ್ ಅವರಿಗೆ ಕರೆ ಮಾಡಿದ ನಕಲಿ ಡಿವೈಎಸ್​​ಪಿ ನಿಮ್ಮ ವಿರುದ್ಧ ಡಿಡಿಪಿಐ, ಬಿಇಒಗಳು ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಿಸಿ ಎಸಿಬಿಗೆ‌ ದೂರು ನೀಡಿದ್ದಾರೆ. ನಮ್ಮ ಅಧಿಕಾರಿಗಳು ನಿಮ್ಮ ಕಚೇರಿ ಹಾಗೂ ಮನೆ ಬಳಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ‌ ಎಂದು ಹೇಳಿದ್ದಾರೆ..

Bengaluru
ಬೆಂಗಳೂರು

By

Published : May 27, 2022, 12:49 PM IST

ಬೆಂಗಳೂರು :ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ಎಸಿಬಿ ಡಿವೈಎಸ್​ಪಿ ಹೆಸರಿನಲ್ಲಿ ಕರೆ ಮಾಡಿ ನಾಳೆ ಎಸಿಬಿ ದಾಳಿ ಮಾಡಲಿದ್ದು, ಇದನ್ನು ತಪ್ಪಿಸಲು ಹಣ ಹಾಗೂ ಗಿಫ್ಟ್ ನೀಡುವಂತೆ ಬೇಡಿಕೆಯಿಟ್ಟ ನಕಲಿ‌ ಎಸಿಬಿ ಅಧಿಕಾರಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಣ ಇಲಾಖೆಯ ಅಧೀನ‌ ಕಾರ್ಯದರ್ಶಿ ಧನಂಜಯ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ನಕಲಿ ಅಧಿಕಾರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಕಳೆದ‌ ಮೂರು ದಿನಗಳ ಹಿಂದೆ ಧನಂಜಯ್ ಅವರಿಗೆ ಕರೆ ಮಾಡಿದ ನಕಲಿ ಡಿವೈಎಸ್​​ಪಿ ನಿಮ್ಮ ವಿರುದ್ಧ ಡಿಡಿಪಿಐ, ಬಿಇಒಗಳು ಭ್ರಷ್ಟಾಚಾರ ಎಸಗಿರುವುದಾಗಿ ಆರೋಪಿಸಿ ಎಸಿಬಿಗೆ‌ ದೂರು ನೀಡಿದ್ದಾರೆ. ನಮ್ಮ ಅಧಿಕಾರಿಗಳು ನಿಮ್ಮ ಕಚೇರಿ ಹಾಗೂ ಮನೆ ಬಳಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ‌ ಎಂದು ಹೇಳಿದ್ದಾರೆ.

ಬಳಿಕ ಮತ್ತೊಮ್ಮೆ‌ ಕರೆ ಮಾಡಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಜತೆ ಮಾತನಾಡಿದ್ದು, ದಾಳಿ ನಡೆಯುವುದಿಲ್ಲ. ನಿಮ್ಮ‌ ಒಳ್ಳೆತನ ನೋಡಿ ನಿಮಗೆ ಸಹಾಯ ಮಾಡುತ್ತಿದ್ದೇನೆ.‌ ನಮ್ಮ‌ ಎಸಿಬಿ ತನಿಖಾಧಿಕಾರಿಗಳು ಶ್ರೀಲಂಕಾ ಪ್ರವಾಸ ಹೋಗುತ್ತಿದ್ದು, ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದೇ ರೀತಿ ಇತರೆ ಅಧೀನ ಕಾರ್ಯದರ್ಶಿಗಳಾದ ಶರಣಪ್ಪ ಹಾಗೂ ಪದ್ಮಿನಿ ಎಂಬುವರಿಗೂ ಕರೆ ಮಾಡಿದ್ದಾನೆ. ಆರೋಪಿಯ ಬಗ್ಗೆ ಅನುಮಾನಗೊಂಡ ಇವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಭಟ್ಕಳದಲ್ಲಿ ಮಹಿಳೆಯ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿಗಳ ಬಂಧನ

ABOUT THE AUTHOR

...view details