ಕರ್ನಾಟಕ

karnataka

ETV Bharat / city

ಏರ್​​ಟೆಲ್​​​ ಸಿಮ್​​​ ಸ್ವ್ಯಾಪಿಂಗ್ ಪ್ರಕರಣ ಬಯಲಿಗೆಳೆದ ಬೆಂಗಳೂರು ಸೈಬರ್​​​ ಪೊಲೀಸರು... ಹೇಗೆ ವಂಚನೆ ಮಾಡ್ತಿದ್ರು ಗೊತ್ತಾ?

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಸಿಮ್ ಸ್ವ್ಯಾಪಿಂಗ್ ಪ್ರಕರಣವನ್ನ ಸೈಬರ್ ಕ್ರೈಂ ಪೊಲೀಸರು ಬೇಧಿಸಿದ್ದಾರೆ. ಭಾರತಿ ಏರ್​ಟೆಲ್​​ ಸಂಸ್ಥೆ ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ಸಂಬಂಧ ಸದ್ಯ ಐದು ಜನರನ್ನ ಬಂಧಿಸಿ, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಏರ್ಟೆಲ್‌ ಸಿಮ್ ಸ್ವ್ಯಾಪಿಂಗ್

By

Published : Sep 29, 2019, 5:23 PM IST

ಬೆಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಸಿಮ್ ಸ್ವ್ಯಾಪಿಂಗ್ ಪ್ರಕರಣವನ್ನ ಸೈಬರ್ ಕ್ರೈಂ ಪೊಲೀಸರು ಬಯಲಿಗೆ ಎಳೆದು, ದಾಖಲೆ ಸಮೇತ ಪತ್ತೆ ಮಾಡಿ ವಂಚಕರ ಬೆನ್ನತ್ತಿದ್ದಾರೆ. ಏರ್​​ಟೆಲ್​​ ಕಂಪನಿಯ ಹೆಸರಿನಲ್ಲಿ ರೀಟೇಲರ್ಸ್ ಕೈ ಜೋಡಿಸಿ, ಸಾವಿರಾರು ನಂಬರ್​ಗಳಿಗೆ ಆಧಾರ್ ಕಾರ್ಡ್ ಹಾಗೂ ಫೇಕ್ ದಾಖಲೆಗಳನ್ನು ತೆಗೆದುಕೊಂಡು ಮೋಸ ಮಾಡಿದ್ದಾರೆ.

ಈ ವಿಚಾರ‌ ಭಾರತಿ ಏರ್​​ಟೆಲ್​​ಗೆ ಸಿಕ್ಕಿದ್ದು, ತಕ್ಷಣ ಸೈಬರ್ ಕ್ರೈಂಗೆ 8888,12345, 3333 ಹೀಗೆ ಹಲವಾರು ಫ್ಯಾನ್ಸಿ ನಂಬರ್​ಗಳಿಂದ ದೋಖಾ ಆಗಿರುವ ಮಾಹಿತಿ ನೀಡಿದ್ದಾರೆ. ಸೈಬರ್ ಪೊಲೀಸರು ತನಿಖೆ ನಡೆಸಿದಾಗ ರೀಟೆಲರ್ ಹಾಗೂ ಗ್ರಾಹಕರ ನಡುವೆ ಈ ಹಗರಣ ನಡೆದಿರುವ ವಿಚಾರ ಬಯಲಾಗಿದೆ. ಸದ್ಯ ಪ್ರಕರಣದಲ್ಲಿ 5 ಜನರನ್ನ ಬಂಧಿಸಿರುವ ಸೈಬರ್ ಕ್ರೈಂ ಪೊಲೀಸರು, ಒಟ್ಟು 18 ಫ್ಯಾನ್ಸಿ ನಂಬರ್​ಗಳನ್ನ ಪತ್ತೆ ಹಚ್ಚಿದ್ದು, ಅತಿ ಹೆಚ್ಚು ಚಿಕ್ಕಬಳ್ಳಾಪುರದಿಂದ ಸಿಮ್ ಸ್ವ್ಯಾಪಿಂಗ್ ಆಗಿರುವ ವಿಚಾರ ತಿಳಿದು ಬಂದಿದೆ. ಇದರ ಜಾಲ ಹಿಡಿದು ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಏನಿದು ಸಿಮ್ ಸ್ವ್ಯಾಪಿಂಗ್?

ಸಿಮ್ ಕಾರ್ಡ್ ವರ್ಕ್ ಆಗದಿದ್ದಲ್ಲಿ ಸರ್ವೀಸ್ ಪ್ರೊವೈಡರ್​ಗಳು ಅದೇ ನಂಬರ್​ನಲ್ಲಿ ಬೇರೊಂದು ಸಿಮ್ ನೀಡುತ್ತಾರೆ. ಆದ್ರೆ ಹಳೆ ಸಿಮ್​ನಲ್ಲಿ ಎಲ್ಲಾ ದಾಖಲೆಗಳು ಹಾಗೆ ಇರುತ್ತವೆ. ಕೆಲ ಗಂಟೆಯಲ್ಲಿ ಹಳೆ ಸಿಮ್ ಕಾರ್ಡ್ ಡಿಆ್ಯಕ್ಟಿವೇಟ್ ಆಗಿ ಹೊಸ ನಂಬರ್ ಆ್ಯಕ್ಟಿವೇಟ್ ಆಗುತ್ತೆ. ಈ ಮೂಲಕ ವಂಚನೆ ಮಾಡುವವರು ಇದನ್ನೇ ಬಳಸಿಕೊಂಡು ಎಲ್ಲಾ ದಾಖಲೆಗಳನ್ನು ಉಪಯೋಗಿಸುತ್ತಾರೆ. ಬ್ಯಾಂಕ್ ಖಾತೆ, ಒಟಿಪಿ ಹೀಗೆ ನಾನಾ ಬಗೆಯಿಂದ ಆನ್​ಲೈನ್ ವಂಚನೆ ನಡೆಯುತ್ತದೆ. ಐದು ಸಾವಿರ, ಹತ್ತು ಸಾವಿರ ಲಾಭ ಮಾಡಿಕೊಂಡು ವಂಚನೆ ಮಾಡಲು ಮುಂದಾಗ್ತಾರೆ‌.

ಎಫ್​ಐಆರ್​ ಪ್ರತಿ
ಎಫ್​ಐಆರ್​ ಪ್ರತಿ

ಪ್ರಕರಣ ಬಯಲಾಗಿದ್ದು ಹೇಗೆ?

ಇತ್ತೀಚೆಗೆ ಸಾಕಷ್ಟು ಜನರ ನಂಬರ್​ಗಳು ವರ್ಕ್ ಆಗುತ್ತಿರಲಿಲ್ಲ. ಹೀಗಾಗಿ ಏರ್​​ಟೆಲ್​​ ಸಂಸ್ಥೆಯ ಕಸ್ಟಮರ್ ಕೇರ್​ಗಳಿಗೆ ಹೆಚ್ಚು ಕರೆ ಬರುತ್ತಿದ್ದವು. ಇದರಿಂದ ಎಚ್ಚೆತ್ತ ಸಂಸ್ಥೆ, ಈ ಕುರಿತು ಆಂತರಿಕವಾಗಿ ತನಿಖೆ ಶುರು ಮಾಡಿತ್ತು. ಈ ಮೂಲಕ ಕೆಲ ಫ್ಯಾನ್ಸಿ ನಂಬರ್​ಗಳನ್ನು ಹೊರಗೆಳೆದಿತ್ತು. ಈ ಪಟ್ಟಿಯನ್ನು ಸೈಬರ್ ಕ್ರೈಂ ಪೊಲೀಸರಿಗೆ ನೀಡಿತ್ತು. ಹೀಗಾಗಿ ಆರೋಪಿಗಳ ಜಾಲ ಬೆನ್ನತ್ತಿದ ಸೈಬರ್ ಕ್ರೈಂ ಪೊಲೀಸರು, ಸದ್ಯ ಐದು ಜನರನ್ನ ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ.

ABOUT THE AUTHOR

...view details