ದೊಡ್ಡಬಳ್ಳಾಪುರ: ಟ್ರಾನ್ಸ್ ಫಾರ್ಮರ್ ಬಳಿ ಹುಲ್ಲು ಮೇಯುತ್ತಿದ್ದ ಹಸುವಿಗೆ ವಿದ್ಯುತ್ ಸ್ವರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಕೊಂಗಾಡಿಯಪ್ಪ ಕಾಲೇಜು ಮುಂಭಾಗದ ಟ್ರಾನ್ಸ್ ಫಾರ್ಮರ್ ಬಳಿ ನಡೆದಿದೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ ಕೆಳಗೆ ಹುಲ್ಲು ಮೇಯುತ್ತಿದ್ದ ಹಸು ಸಾವು
ಎಂದಿನಂತೆ ಹುಲ್ಲು ಮೇಯಲು ಹೋಗಿದ್ದ ಹಸುವೊಂದು ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ.
ವಿದ್ಯಾನಗರದ ಹರೀಶ್ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಹರೀಶ್ ಬೆಳಗ್ಗೆ ವಿದ್ಯಾನಗರದ ಮನೆಯಿಂದ ಹಸುಗಳನ್ನು ಮೇಯಿಸಲು ಹೋಗುತಿದ್ದಾಗ ರಸ್ತೆ ಬದಿಯಲ್ಲಿನ ಟ್ರಾನ್ಸ್ ಫಾರ್ಮರ್ ಕೆಳಗೆ ಹುಲ್ಲು ಕಂಡ ಹಸು ಮೇಯಲು ಹೋಗಿದೆ.
ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆಬಿದ್ದ ಪರಿಣಾಮ ಟ್ರಾನ್ಸ್ ಫಾರ್ಮರ್ ಕೆಳಗೆ ವಿದ್ಯುತ್ ಪ್ರಸರಿಸಿದೆ ಎನ್ನಲಾಗಿದ್ದು, ಹುಲ್ಲು ಮೇಯುತ್ತಿದ್ದ ಹಸುವಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಹಸುವಿನ ಮಾಲೀಕ ಹರೀಶ್ ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದ. ಆದರೆ ಈಗ ಹಸುವಿನ ಸಾವಿನಿಂದ ಆದಾಯದ ಮೂಲ ಕಳೆದುಕೊಂಡು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.