ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ ಉಪನ್ಯಾಸಕ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಸ್ಥಳ ನಿಯುಕ್ತಿಗೆ ಕೌನ್ಸಲಿಂಗ್ಗೆ ಕರೆಯಲಾಗಿದೆ.
ಪಿಯು ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೌನ್ಸಲಿಂಗ್
ಆಗಸ್ಟ್ 10 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಇಂಗ್ಲೀಷ್ ವಿಷಯದ ಹುದ್ದೆಗಳಿಗೆ ಮಾತ್ರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯ ಕೆ-ಸ್ವಾನ್ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಥಳ ನಿಯುಕ್ತಿ ಕೌನ್ಸಲಿಂಗ್ ನಡೆಯಲಿದೆ. ಉಳಿದ ವಿಷಯಗಳ ವೇಳಾಪಟ್ಟಿ ನಂತರ ಬರಲಿದೆ.
ಆಗಸ್ಟ್ 10 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಇಂಗ್ಲೀಷ್ ವಿಷಯದ ಹುದ್ದೆಗಳಿಗೆ (ಕಲ್ಯಾಣ ಕರ್ನಾಟಕೇತರ (NHK) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯ ಕೆ-ಸ್ವಾನ್ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಥಳ ನಿಯುಕ್ತಿ ಕೌನ್ಸಲಿಂಗ್ ನಡೆಸಲಾಗುತ್ತದೆ.
ಉಳಿದ ವಿಷಯಗಳ ವೇಳಾಪಟ್ಟಿ ಹಾಗೂ ಇತರೆ ಮಾಹಿತಿಗಳುಳ್ಳ ವಿವರಗಳನ್ನು ಇಲಾಖಾ ವೆಬ್ ಸೈಟ್ www.pue.kar.nic.in ನಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳು ವೇಳಾಪಟ್ಟಿಗೆ ಅನುಸಾರವಾಗಿ ರಾಜ್ಯದ ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳ ಕೆ-ಸ್ವಾನ್ ಕೊಠಡಿಯಲ್ಲಿ ಹಾಜರಾಗಬಹುದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.