ಕರ್ನಾಟಕ

karnataka

ETV Bharat / city

ಮೇಲ್ಮನೆ ಉಪ ಚುನಾವಣೆ: ಕಣದಿಂದ ಹಿಂದೆ ಸರಿದ ಪಕ್ಷೇತರ ಅಭ್ಯರ್ಥಿ,ಲಕ್ಷ್ಮಣ ಸವದಿ ಹಾದಿ ಸುಗಮ - ಲಕ್ಷ್ಮಣ್ ಸವದಿ ವಿಧಾನಪರಿಷತ್ ಚುನಾವಣೆ

ವಿಧಾನ ಪರಿಷತ್ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಹಿಂದೆ ಸರಿದಿದ್ದರಿಂದ ಸವದಿ ಅವರಿಗೆ ಬಂಪರ್ ಹೊಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಬೆಂಬಲ ಸಿಗಲಿದೆಯೆಂದು ನಂಬಿಕೊಂಡು ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಕಣದಿಂದ ನಿವೃತ್ತಿ ಪಡೆದಿದ್ದಾರೆ.

council-elections-independent-candidate-is-retiring
ಪಕ್ಷೇತರ ಅಭ್ಯರ್ಥಿ ಅನಿಲ್​ ಕುಮಾರ

By

Published : Feb 15, 2020, 11:31 PM IST

ಬೆಂಗಳೂರು: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ಅನಿಲ್​ ಕುಮಾರ ಸದ್ಯ ನಿವೃತ್ತಿ ಪಡೆದಿದ್ದು, ಡಿಸಿಎಂ‌ ಲಕ್ಷ್ಮಣ ಸವದಿ ಹಾದಿ ಸುಗಮವಾಗಿದೆ.

ವಿಧಾನ ಪರಿಷತ್ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಹಿಂದೆ ಸರಿದಿದ್ದರಿಂದ ಸವದಿ ಅವರಿಗೆ ಬಂಪರ್ ಹೊಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಬೆಂಬಲ ಸಿಗಲಿದೆಯೆಂದು ನಂಬಿಕೊಂಡು ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಕಣದಿಂದ ನಿವೃತ್ತಿ ಪಡೆದಿದ್ದಾರೆ.

ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದ ಹಿನ್ನೆಲೆಯಲ್ಲಿ ಇಂದು ವಿಧಾನಸೌಧಕ್ಕೆ ಆಗಮಿಸಿದ ಅನಿಲ್ ಕುಮಾರ್ ನಿವೃತ್ತಿ ಪಡೆದಿರುವುದಾಗಿ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿಯವರಿಗೆ ಪತ್ರ ನೀಡಿದರು.

ಕಣದಿಂದ ಹಿಂದೆ ಸರಿದ ಪಕ್ಷೇತರ ಅಭ್ಯರ್ಥಿ, ಲಕ್ಷ್ಮಣ ಸವದಿ ಹಾದಿ ಸುಗಮ

ಯಾರಿಗೂ ಮುಜುಗರ ಆಗಬಾರದೆಂದು ಈ ನಿರ್ಧಾರಕ್ಕೆ ಬಂದಿದ್ದೇನೆ. ಸಮಾನಮನಸ್ಕರು ಹಾಗೂ ಜ್ಯಾತ್ಯಾತೀತ ಪಕ್ಷಗಳು ಸಹಕಾರ ಕೊಡಬಹುದೆಂದು ಅಂದುಕೊಂಡಿದ್ದೆ. ಆದರೆ ಸಹಕಾರ ಸಿಗದ ಕಾರಣ ನನ್ನ ಧಾರ್ಮಿಕ ಗುರುಗಳ ಆದೇಶದಂತೆ ನಿವೃತ್ತಿ ಪಡೆದಿದ್ದೇನೆ ಎಂದು ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾನು ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿ ಕಣದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್ ನಾಯಕರ ಜತೆ ಆಗಮಿಸಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಫೆ. 17 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿ ಕಣದಿಂದ‌ ಹಿಂದೆ ಸರಿದಿದ್ದರೂ ನೆಪ ಮಾತ್ರಕ್ಕೆ ಮತದಾನ ನಡೆಯಲಿದೆ.

ಸಧ್ಯ ಲಕ್ಷ್ಮಣ ಸವದಿ ಅವರ ಗೆಲುವಿನ ಹಾದಿ ಸುಗಮವಾಗಿದೆ. ಫೆ.18 ರೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್​ಗೆ ಲಕ್ಷ್ಮಣ ಸವದಿ ಸದಸ್ಯರಾಗಲೇಬೇಕಾದ ಅನಿವಾರ್ಯತೆ ಇತ್ತು, ಒಂದು ವೇಳೆ ಉಪ ಚುನಾವಣೆಯಲ್ಲಿ ಸೋತರೆ ಡಿಸಿಎಂ ಸ್ಥಾನದಿಂದ ಕೆಳಗೆ ಇಳಿಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಈ ಉಪ ಚುನಾವಣೆ ಸವದಿ ಅವರಿಗೆ ತುಂಬಾ ಮುಖ್ಯವಾಗಿತ್ತು.

ABOUT THE AUTHOR

...view details