ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಪ್ರತಿ ದಿನ ಕೊರೊನಾ ಪರೀಕ್ಷೆ ಮಾಡುವ ಸಾಮರ್ಥ್ಯ ಮತ್ತು ಪರೀಕ್ಷಾ ಕೇಂದ್ರಗಳು ಎಷ್ಟಿವೆ ಗೊತ್ತಾ? - ಕೊರೊನಾ ಪರೀಕ್ಷಾ ಕೇಂದ್ರಗಳು

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಾಗೂ ಕೊರೊನಾ ಪೀಡಿತರ ಚಿಕಿತ್ಸೆಗೆ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಒಟ್ಟು ಸೋಂಕು ಪತ್ತೆ ಪರೀಕ್ಷಾ ಕೇಂದ್ರಗಳೆಷ್ಟು? ಎಂಬುದರ ಮಾಹಿತಿ ಇಲ್ಲಿದೆ.

corona test center
ಸೋಂಕು ಪರೀಕ್ಷಾ ಕೇಂದ್ರ

By

Published : Jun 30, 2020, 1:32 PM IST

ಬೆಂಗಳೂರು:ರಾಜ್ಯದಲ್ಲಿ ಮಹಾಮಾರಿ ಕೊರೊನಾ ದಿನೇ ದಿನೆ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ಸದ್ಯಕ್ಕೆ ಸೋಂಕು ಪತ್ತೆ ಪರೀಕ್ಷೆಗೆ 79 ಪರೀಕ್ಷಾ ಕೇಂದ್ರಗಳಿದ್ದು, ಪ್ರತಿದಿನ 15 ಸಾವಿರ ಕೊರೊನಾ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಈವರೆಗೆ 6 ಲಕ್ಷ ಜನರ ತಪಾಸಣೆ ನಡೆಸಲಾಗಿದ್ದು, ವಾರಕ್ಕೆ ಲಕ್ಷ ಜನರ ತಪಾಸಣೆ ಮಾಡುವ ಸಾಮರ್ಥ್ಯ ಹೊಂದಿವೆ.

ರಾಜ್ಯದಲ್ಲಿ ಪ್ರಥಮ ಕೊರೊನಾ ಸೋಂಕು ಪತ್ತೆಯಾದಾಗ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಸಂಶೋಧನಾ ಕೇಂದ್ರ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯಲ್ಲಿ ಮಾತ್ರವೇ ಕೊರೊನಾ ಪರೀಕ್ಷಾ ಕೇಂದ್ರಗಳಿದ್ದವು. ಆದರೆ 2 ಲ್ಯಾಬ್​ಗಳಿಂದ ಆರಂಭಗೊಂಡ ಪರೀಕ್ಷಾ ಕೇಂದ್ರಗಳನ್ನು ಹಂತ ಹಂತವಾಗಿ ವಿಸ್ತರಣೆಯಾಗುತ್ತಿದ್ದು, ಈಗ 44 ಸರ್ಕಾರಿ ಆಸ್ಪತ್ರೆ ಹಾಗೂ 35 ಖಾಸಗಿ ಆಸ್ಪತ್ರೆ ಸೇರಿ ಒಟ್ಟು 79 ಪರೀಕ್ಷಾ ಕೇಂದ್ರಗಳನ್ನು ಹೊಂದಲಾಗಿದೆ.

ಸೋಂಕು ಪರೀಕ್ಷಾ ಕೇಂದ್ರ

ಈವರೆಗೆ ರಾಜ್ಯದಲ್ಲಿ ಒಟ್ಟು 6,05,159 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 14,295 ಕೊರೊನಾ ಪಾಸಿಟಿವ್ ವರದಿಗಳು ಬಂದಿವೆ. ಕೇಂದ್ರಗಳ ಸೋಂಕು ಪರೀಕ್ಷಾ ಸಾಮರ್ಥ್ಯದ ವಿವರ ಇಲ್ಲಿದೆ.

ಪರೀಕ್ಷಾ ಸಾಮರ್ಥ್ಯ ವೃದ್ಧಿ ವಿವರ:

  • ಏಪ್ರಿಲ್-7 : 500
  • ಏಪ್ರಿಲ್-13: 1000
  • ಏಪ್ರಿಲ್-17: 2000
  • ಏಪ್ರಿಲ್-22: 3000
  • ಏಪ್ರಿಲ್-28: 4000
  • ಮೇ- 04 : 5000
  • ಮೇ- 14 : 6000
  • ಮೇ- 14 : 7000
  • ಮೇ- 20 : 8000
  • ಮೇ -22 : 12000
  • ಜೂ- 30 : 15000

ಪ್ರತಿ ದಿನ 15 ಸಾವಿರ ಕೊರೊನಾ ಪರೀಕ್ಷಾ ಸಾಮರ್ಥ್ಯ ರಾಜ್ಯಕ್ಕೆ ಇದ್ದು, ಜೂನ್ 26 ರಂದು 14,733 ಕೊರೊನಾ ಪರೀಕ್ಷೆ ನಡೆಸಿರುವುದು ಈವರೆಗಿನ ಗರಿಷ್ಠ ಪ್ರಮಾಣದ ಪರೀಕ್ಷೆಯಾಗಿದೆ. ಕಳೆದ ಒಂದು ವಾರದಿಂದ 12-14 ಸಾವಿರ ಸಂಖ್ಯೆಯ ಪ್ರಮಾಣದಲ್ಲಿ ಕೊರೊನಾ ತಪಾಸಣೆ ನಡೆಸಲಾಗುತ್ತಿದೆ.

ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಪರೀಕ್ಷಾ ಕೇಂದ್ರಗಳು ಇದ್ದು, ಹೆಚ್ಚು ಸೋಂಕು ಕಂಡುಬರುತ್ತಿರುವ ಕಡೆ ಎರಡು ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ಇಷ್ಟೆಲ್ಲಾ ಪರೀಕ್ಷಾ ಕೇಂದ್ರ, ಕ್ಯಾಬ್​ಗಳು ಇದ್ದರೂ ಕೊರೊನಾ ಫಲಿತಾಂಶ ಬರಲು 24-48 ಗಂಟೆ ಸಮಯ ತೆಗೆದುಕೊಳ್ಳಲಾಗುತ್ತಿದೆ. ಈ ಸಮಯದಲ್ಲಿ ಕಡಿತವಾಗುವ ಅಗತ್ಯವಿದ್ದು, ಇತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ. ಗರಿಷ್ಠ 24 ಗಂಟೆಯೊಳಗಡೆ ಪರೀಕ್ಷಾ ವರದಿ ಸಿಕ್ಕಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರ ಸಂಖ್ಯೆ ಕಡಿಮೆ ಇರಲಿದೆ. ಇದರಿಂದ ಸಮುದಾಯಕ್ಕೆ ಹರಡುವುದನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಶ್ವಾಸಕೋಶ ಸ್ಕ್ಯಾನಿಂಗ್​​
ಇದೀಗ ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ನಡೆಸುವ ಬದಲು ಕೊರೊನಾ ಸಾಧ್ಯತೆ ಇರುವವರನ್ನು ಪತ್ತೆ ಹಚ್ಚಿ ಕೊರೊನಾ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಶ್ವಾಸಕೋಶ ಸ್ಕ್ಯಾನಿಂಗ್ ಮಾಡಿದರೆ ಎರಡು ನಿಮಿಷದಲ್ಲಿ ಫಲಿತಾಂಶ ಬರಲಿದೆ. ಶೇ.80 ರಷ್ಟು ಶ್ವಾಸಕೋಶ ಒತ್ತಡ ಕಂಡು ಬಂದರೆ ಅವರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಈ ಪ್ರಸ್ತಾವನೆಗೆ ತಜ್ಞರ ಸಮಿತಿ ಸಮ್ಮತಿ ನೀಡಿದ ಕೂಡಲೇ ಅಳವಡಿಸಿಕೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿರುವ ಸೋಂಕು ಪತ್ತೆ ಪರೀಕ್ಷಾ ಕೇಂದ್ರಗಳು

  • ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ, ಬೆಂಗಳೂರು
  • ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು
  • ಕಮಾಂಡ್ ಆಸ್ಪತ್ರೆ, ಬೆಂಗಳೂರು
  • ಎಂಎಂಸಿ ಆ್ಯಂಡ್ ಆರ್‌ಐ, ಮೈಸೂರು
  • ಚಾಮರಾಜೇಂದ್ರ ಆಸ್ಪತ್ರೆ, ಹಾಸನ
  • ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ
  • ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿ
  • ನಿಮ್ಹಾನ್ಸ್, ಬೆಂಗಳೂರು
  • ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬಳ್ಳಾರಿ
  • ವೆನ್ ಲಾಕ್ ಆಸ್ಪತ್ರೆ, ಮಂಗಳೂರು
  • ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿ
  • ಎನ್‌ಸಿ‌ಬಿಎಸ್, ಜಿಕೆವಿಕೆ ಆವರಣ, ಬೆಂಗಳೂರು
  • ಡಿಐಎಂಹೆಚ್‌ಎಎನ್‌ಎಸ್, ಧಾರವಾಡ
  • ಕಿದ್ವಾಯಿ ಆಸ್ಪತ್ರೆ, ಬೆಂಗಳೂರು
  • ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
  • ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ
  • ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಾಮರಾಜನಗರ
  • ವಿಡಿಎಲ್, ಶಿವಮೊಗ್ಗ
  • ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ
  • ಆನಂದ ಲ್ಯಾಬ್, ಶ್ರೀಶಂಕರ ಸಂಶೋಧನಾ ಕೇಂದ್ರ, ಬೆಂಗಳೂರು
  • ಕ್ಯಾನ್ಸೈಟ್ ಲ್ಯಾಬ್, ಶ್ರೀಶಂಕರ ಸಂಶೋಧನಾ ಕೇಂದ್ರ, ಬೆಂಗಳೂರು
  • ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರು
  • ಎಸ್‌ವೈಎನ್‌ಜಿಇಎನ್ಇ, ಬಯೋಕಾನ್ ಪಾರ್ಕ್, ಬೆಂಗಳೂರು
  • ನಾರಾಯಣ ಹೃದಯಾಲಯ, ಬೆಂಗಳೂರು
  • ಆಸ್ಟರ್ ಕ್ಲಿನಿಕಲ್ ಲ್ಯಾಬ್, ಆನೇಕಲ್
  • ಮೈಕ್ರೋಬಯೋಲಾಜಿಕಲ್ ಲ್ಯಾಬ್, ಕುಂಬಳಗೋಡು, ಬೆಂಗಳೂರು
  • ಯೆನೆಪೋಯಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು
  • ಹೈಬ್ರಿನೋಮಿಕ್ಸ್ ಲ್ಯಾಬ್, ಬೆಂಗಳೂರು
  • ಎಸ್.ಎಸ್. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ದಾವಣಗೆರೆ
  • ಕ್ಸಿಟೋನ್ ಡಯೋಗ್ನಾಸ್ಟಿಕ್ಸ್, ಪೀಣ್ಯ, ಬೆಂಗಳೂರು
  • ಸೇಂಟ್ ಜೋಸೆಫ್ ವೈದ್ಯಕೀಯ ವಿಜ್ಞಾನಗಳ ಕಾಲೇಜು ಆಸ್ಪತ್ರೆ, ಬೆಂಗಳೂರು
  • ಕಸ್ತೂರಿಬಾ ಮೆಡಿಕಲ್ ಕಾಲೇಜು, ಮಣಿಪಾಲ್
  • ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು
  • ಸಕ್ರ ವರ್ಲ್ಡ್ ಹಾಸ್ಪಿಟಲ್, ಬೆಂಗಳೂರು
  • ಕೆಎಂಸಿ ಆಸ್ಪತ್ರೆ, ಮಂಗಳೂರು
  • ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ, ಮಂಗಳೂರು
  • ಜೆಜೆಎಂ ಮೆಡಿಕಲ್ ಕಾಲೇಜು, ದಾವಣಗೆರೆ
  • ಕಿಮ್ಸ್, ಬೆಂಗಳೂರು
  • ನಾರಾಯಣ ನೇತ್ರಾಲಯ, ಬೆಂಗಳೂರು
  • ಜಿಲ್ಲಾಸ್ಪತ್ರೆ, ತುಮಕೂರು
  • ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿ
  • ಜಿಲ್ಲಾಸ್ಪತ್ರೆ, ವಿಜಯಪುರ
  • ಜಿಲ್ಲಾಸ್ಪತ್ರೆ, ಬಾಗಲಕೋಟೆ
  • ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಾರವಾರ
  • ಅಪೋಲೊ ಆಸ್ಪತ್ರೆ, ಬೆಂಗಳೂರು
  • ಪ್ರಭಾಕರ್ ಕೋರೆ ಆಸ್ಪತ್ರೆ, ಬೆಳಗಾವಿ
  • ಸಿಎಂಐ ಆಸ್ಪತ್ರೆ, ಬೆಂಗಳೂರು
  • ವಿಕ್ರಮ್ ಆಸ್ಪತ್ರೆ, ಬೆಂಗಳೂರು
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಚಿಕ್ಕಬಳ್ಳಾಪುರ
  • ಕಿಮ್ಸ್, ಕೊಪ್ಪಳ
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಚಿಕ್ಕಮಗಳೂರು
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಯಾದಗಿರಿ
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಉಡುಪಿ
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಚಿತ್ರದುರ್ಗ
  • ಬಿಬಿಎಂಪಿ ಫೀವರ್ ಕ್ಲಿನಿಕ್, ಆಡುಗೋಡಿ
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಚಾಮರಾಜನಗರ
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ರಾಮನಗರ
  • ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಯಚೂರು
  • ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೀದರ್
  • ಎಸ್‌ಎನ್‌ಆರ್ ಆಸ್ಪತ್ರೆ, ಕೋಲಾರ
  • ಬೌರಿಂಗ್ ಆಸ್ಪತ್ರೆ, ಬೆಂಗಳೂರು
  • ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಕೋಲಾರ
  • ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ
  • ಮಣಿಪಾಲ್ ಆಸ್ಪತ್ರೆ, ಬೆಂಗಳೂರು
  • ಯುನೈಟೆಡ್ ಆಸ್ಪತ್ರೆ, ಕಲಬುರಗಿ
  • ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮಲ್ಲೇಶ್ವರ, ಬೆಂಗಳೂರು
  • ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ, ಬೆಂಗಳೂರು
  • ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು
  • ಟ್ರಿಡೆಂಟ್ ಲ್ಯಾಬ್, ಬೆಂಗಳೂರು
  • ಎನ್ಎಂಆರ್ ಲ್ಯಾಬ್, ಧಾರವಾಡ
  • ಮೆಡಿಕ್ಲ್ಯೂ ಲ್ಯಾಬ್, ನಾಗರಬಾವಿ, ಬೆಂಗಳೂರು
  • ಲಾಲ್‌ಪತ್ ಲ್ಯಾಬ್, ಬೆಂಗಳೂರು
  • ಮೆಟ್ರೋಪೊಲಿಸ್ ಲ್ಯಾಬ್, ಮಲ್ಲೇಶ್ವರಂ,ಬೆಂಗಳೂರು
  • ಮೆಡಲ್ ಹೆಲ್ತ್ ಕೇರ್, ಬೆಂಗಳೂರು
  • ಆನ್ ಕ್ವೆಸ್ಟ್ ಲ್ಯಾಬ್, ಬೆಂಗಳೂರು
  • ಅಪೊಲೊ ಲ್ಯಾಬ್, ಕೋರಮಂಗಲ, ಬೆಂಗಳೂರು
  • ಮೆಡ್‌ಜೆನೋಮ್ ಲ್ಯಾಬ್, ಬೊಮ್ಮಸಂದ್ರ, ಬೆಂಗಳೂರು
  • ಕೋರ್ ಡಯಾಗ್ನೋಸ್ಟಿಕ್ ಸೆಂಟರ್, ಬೆಂಗಳೂರು

ಒಟ್ಟಿನಲ್ಲಿ ರಾಜ್ಯದಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿವೆ. ವಾರಕ್ಕೆ ಲಕ್ಷ ಜನರ ಪರೀಕ್ಷೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ABOUT THE AUTHOR

...view details