ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕು ದಿನೇದಿನೆ ತಾರಕಕ್ಕೇರುತ್ತಿದೆ. ನಿನ್ನೆಯಷ್ಟೇ 28 ಸಾವಿರ ಗಡಿ ದಾಟಿದ್ದ ಕೊರೊನಾ ಕೇಸ್ಗಳು, ಇಂದು ಏಕಾಏಕಿ 32 ಸಾವಿರ ಕೇಸ್ ಪತ್ತೆಯಾಗಿವೆ. ಅಲ್ಲದೇ, 7 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದು ರಾಜ್ಯದಲ್ಲಿ 2,18,473 ಜನರನ್ನು ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 32,793 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಕೊರೊನಾ ಪಾಸಿಟಿವಿಟಿ ದರ 15%ಕ್ಕೆ ಮುಟ್ಟಿದೆ. ಇನ್ನು ರಾಜ್ಯದಲ್ಲಿ 4,273 ಜನರು ಕೊರೊನಾದಿಂದ ಗುಣಮುಖರಾದರೆ, 1,69,850 ಸಕ್ರಿಯ ಕೇಸ್ಗಳಿವೆ.
ಬೆಂಗಳೂರಿನಲ್ಲಿ ನಿಲ್ಲದ ಕೊರೊನಾ ಆರ್ಭಟ
ಇಂದು ದಾಖಲಾದ 32 ಸಾವಿರ ಕೊರೊನಾ ಕೇಸ್ಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 22,284 ಕೇಸ್ಗಳು ಪತ್ತೆಯಾಗಿವೆ. ಅಲ್ಲದೇ ಐವರು ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ತಡೆಗೆ ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಕೊರೊನಾ ಪಾಸಿಟಿವ್ ಕೇಸ್ಗಳು ಹೆಚ್ಚಳವಾಗುವುದರ ಜೊತೆಗೆ, ಪಾಸಿಟಿವಿಟಿ ದರವೂ ಹೆಚ್ಚುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 1,283 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶಗಳಿಂದ 490 ಮಂದಿ ಬಂದಿಳಿದಿದ್ದಾರೆ.
ರೂಪಾಂತರಿ ಮಾಹಿತಿ: