ಬೆಂಗಳೂರು:ಆದಾಯ ತೆರಿಗೆ ಅಧಿಕಾರಿಗಳು ಸದಾಶಿವನಗರ ಬಳಿ ಇರುವ ಪರಮೇಶ್ವರ್ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ತುಮಕೂರಿನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಐಟಿ ಅಧಿಕಾರಿಗಳು, ಪರಮೇಶ್ವರ್ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಪರಮೇಶ್ವರ್ ಬೆಂಗಳೂರಿನ ನಿವಾಸದಲ್ಲಿ ಮುಂದುವರೆದ ಐಟಿ ಶೋಧ - IT officers
ಆದಾಯ ತೆರಿಗೆ ಅಧಿಕಾರಿಗಳು ಸದಾಶಿವನಗರ ಬಳಿ ಇರುವ ಪರಮೇಶ್ವರ್ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ತುಮಕೂರಿನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಅಧಿಕಾರಿಗಳು, ಪರಮೇಶ್ವರ್ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಪರಮೇಶ್ವರ್ ಮೆಡಿಕಲ್ ಸೀಟ್ಗಳ ಹಂಚಿಕೆಯಲ್ಲಿ ನಗದು ರೂಪದಲ್ಲಿ ವಿದ್ಯಾರ್ಥಿಗಳಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿರುವ ಆರೋಪವಿದ್ದು, ಆ ಹಣದ ಮಾಹಿತಿಯನ್ನ ಐಟಿ ಆಧಿಕಾರಿಗಳು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ, ಪರಮೇಶ್ವರ್ ಮಗಳು ಉಪಯೋಗಿಸುತ್ತಾರೆ ಎನ್ನಲಾದ ಐಷಾರಾಮಿ ಕಾರುಗಳ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ಪರಮೇಶ್ವರ್ ಖಾತೆ ಹೊಂದಿದ್ದ ಬ್ಯಾಂಕ್ಗಳ ಮಾಹಿತಿ ಪಡೆಯಲು ಪರಂ ಆಪ್ತರನ್ನ ಕರೆದೊಯ್ದು ಮಾಹಿತಿ ಪಡೆಯುತ್ತಿದ್ದಾರೆ. ಕೆಲ ಬ್ಯಾಂಕ್ಗಳಲ್ಲಿ ಬೇನಾಮಿ ಖಾತೆ ಹೊಂದಿರುವ ಶಂಕೆಯಿದ್ದು, ತನಿಖೆ ಮುಂದುವರೆದಿದೆ. ಮತ್ತೊಂದೆಡೆ ಪರಂ ಪರ ವಕೀಲರು ಹಾಗೂ ಆಪ್ತರು ಪರಮೇಶ್ವರ್ ಅವರನ್ನ ಭೇಟಿ ಮಾಡಲು ಬಂದರು ಕೂಡ ಐಟಿ ಅಧಿಕಾರಿಗಳು ಯಾರನ್ನ ಒಳಗಡೆ ಬಿಡದೇ ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.