ಕರ್ನಾಟಕ

karnataka

ETV Bharat / city

ಕಾಂಗ್ರೆಸ್ ಅಧಿನಾಯಕಿಗೆ ಇಡಿ ನೋಟಿಸ್ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ: ಖಾಕಿ ಸರ್ಪಗಾವಲು

ನಾಳೆ ರಾಜ್ಯ ಕಾಂಗ್ರೆಸ್ ನಗರದ ಫ್ರೀಡಂ ಪಾರ್ಕಿನಲ್ಲಿ ಎಐಸಿಸಿ ಅಧ್ಯಕ್ಷೆ ಸೊನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡಿರುವುದನ್ನ ವಿರೋಧಿಸಿ ಪ್ರತಿಭಟನೆ ಮಾಡಲಿದ್ದು ಇದಕ್ಕೆ ಖಾಕಿ ಅಗತ್ಯ ಕ್ರಮಗಳನ್ನು ಮಾಡಿಕೊಂಡಿದೆ.

ಖಾಕಿ ಸರ್ಪಗಾವಲು
ಖಾಕಿ ಸರ್ಪಗಾವಲು

By

Published : Jul 20, 2022, 10:45 PM IST

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೊನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ನೀಡಿರುವುದನ್ನ ವಿರೋಧಿಸಿ ನಾಳೆ ರಾಜ್ಯ ಕಾಂಗ್ರೆಸ್ ನಗರದ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ನಿಯಂತ್ರಣಕ್ಕೆ ಪೊಲೀಸ್ ಸರ್ಪಗಾವಲು ಸಿದ್ಧವಾಗಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಹೀಗಾಗಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ 5 ಎಸಿಪಿ, 15 ಇನ್​ಸ್ಟೆಕ್ಟರ್, 30 ಪಿಎಸ್ಐ ಸೇರಿದಂತೆ 600 ಮಂದಿ ಪೊಲೀಸ್ ಸಿಬ್ಬಂದಿ ನಾಳೆ ಫ್ರೀಡಂ ಪಾರ್ಕ್ ಸುತ್ತಮುತ್ತ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಣ್ಗಾವಲು ವಹಿಸಲಿದ್ದು ಹೆಚ್ಚುವರಿಯಾಗಿ 5 ಕೆಎಸ್ಆರ್​ಪಿ ತುಕಡಿಗಳನ್ನು ಬಂದೊಬಸ್ತ್​ನಲ್ಲಿ ನಿಯೋಜಿಸಲಾಗಿದೆ.

ಪ್ರತಿಭಟನೆಯಿಂದ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದ್ದು ಸಂಚಾರಿ ಪೊಲೀಸರಿಂದಲೂ ಅಗತ್ಯ ತಯಾರಿ ನಡೆದಿದೆ.

ಇದನ್ನೂ ಓದಿ:ನಮಗಂತೂ ಮೋದಿ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಎಲ್ಲಿ​​​​​ ಕಂಡರೋ ಗೊತ್ತಿಲ್ಲ: ನಲಪಾಡ್ ವ್ಯಂಗ್ಯ

For All Latest Updates

ABOUT THE AUTHOR

...view details