ಕರ್ನಾಟಕ

karnataka

By

Published : Jul 27, 2019, 4:42 AM IST

ETV Bharat / city

ಬಿಎಸ್​ವೈ ಆಹ್ವಾನಿಸಿದರೂ ಪದಗ್ರಹಣಕ್ಕೆ ಬಾರದ ಕೈ-ತೆನೆ ನಾಯಕರು!

ರಾಜಭವನದಲ್ಲಿ ನಡೆದ   ಸಮಾರಂಭಕ್ಕೆ ಮೈತ್ರಿ  ನಾಯಕರನ್ನು ಸ್ವತಃ   ಯಡಿಯೂರಪ್ಪ ಅವರೇ  ಆಹ್ವಾನಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ಗೈರಾಗುವ ಮೂಲಕ ಮೈತ್ರಿ ನಾಯಕರು ವಿರೋಧ ವ್ಯಕ್ತಪಡಿಸಿದವು.

ಪದಗ್ರಹಣ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್​. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭಕ್ಕೆ ಮೈತ್ರಿ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಣಿಸಲಿಲ್ಲ.

ರಾಜಭವನದಲ್ಲಿ ನಡೆದ ಸಮಾರಂಭಕ್ಕೆ ಮೈತ್ರಿ ನಾಯಕರನ್ನು ಸ್ವತಃ ಯಡಿಯೂರಪ್ಪ ಅವರೇ ಆಹ್ವಾನಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ಗೈರಾಗುವ ಮೂಲಕ ಮೈತ್ರಿ ನಾಯಕರು ವಿರೋಧ ವ್ಯಕ್ತಪಡಿಸಿದರು.

ಬಿಎಸ್​ವೈ ಪದಗ್ರಹಣ

ಪ್ರಮಾಣವಚನ ಸಮಾರಂಭಕ್ಕೂ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೂ ಆಹ್ವಾನಿಸುತ್ತೇನೆ ಎಂದು ಹೇಳಿದ್ದರು. ಆದರೆ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಮಾಜಿ ಸಚಿವರಾದ ಎಂ.ಬಿ ಪಾಟೀಲ್, ಡಿ.ಕೆ ಶಿವಕುಮಾರ್ ಸೇರಿದಂತೆ ಯಾವೊಬ್ಬ ನಾಯಕರೂ ಆಗಮಿಸಿರಲಿಲ್ಲ. ಅಂತೆಯೆ ಜೆಡಿಎಸ್​ ಪಾಳೆಯದಿಂದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸೇರಿದಂತೆ ಯಾರೊಬ್ಬರೂ ಹಾಜರಿರಲಿಲ್ಲ. ಈ ಮಧ್ಯೆ ಅಚ್ಚರಿ ಮೂಡಿಸುವಂತೆ, ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್ ರಾಜಣ್ಣ ಹಾಗೂ ರೋಷನ್ ಬೇಗ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮೈತ್ರಿ ಸರ್ಕಾರ ಪತನಕ್ಕೆ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದ ಕೈ-ತೆನೆ ನಾಯಕರು ಯಡಿಯೂರಪ್ಪ ಪದಗ್ರಹಣ ಸಮಾರಂಭಕ್ಕೆ ಪಾಲ್ಗೊಳ್ಳದಿರಲು ಮೊದಲೇ ನಿರ್ಧರಿಸಿದ್ದರು. ಪಕ್ಷದ ಮುಖಂಡರಿಗೂ ಸೂಚನೆ ನೀಡಿ, ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಕಟ್ಟಪ್ಪಣೆ ವಿಧಿಸಿದ್ದರು ಎಂದು ಹೇಳಲಾಗ್ತಿದೆ.

For All Latest Updates

TAGGED:

ABOUT THE AUTHOR

...view details