ಬೆಂಗಳೂರು: ಪೊಲೀಸರು ಮನೆಗೆ ಬಂದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿರುವ ಮಹಿಳೆಯೊಬ್ಬರು ಈ ದೇಶವೇ ಕೆಟ್ಟದ್ದು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಪೊಲೀಸರಿಗೆ ದೂರು ನೀಡಿದ್ದಕ್ಕೆ ದೇಶವನ್ನೇ ದೂಷಿಸಿದ ಮಹಿಳೆ ಅಕ್ಕ ಪಕ್ಕದ ನಿವಾಸಿಗಳು ನೀಲ್ಮಾ ದಿಲೀಪನ್ ಎಂಬುವರ ಮನೆಯಲ್ಲಿ ಲೌಡ್ ಸ್ಪೀಕರ್ ಸೌಂಡ್ ಹಚ್ಚಾಗುತ್ತಿದೆ ಎಂದು ಫೋನ್ ಮೂಲಕ ದೂರು ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಹಾಗೂ ಮನೆಯವರ ನಡುವೆ ಜಟಾಪಟಿಯಾಗಿದೆ.
ಪೊಲೀಸರಿಗೆ ದೂರು ನೀಡಿದ್ದಕ್ಕೆ ದೇಶವನ್ನೇ ದೂಷಿಸಿದ ಮಹಿಳೆ ಈ ವೇಳೆ, ಸ್ಥಳಕ್ಕಾಗಮಿಸಿದ ಹಲಸೂರು ಪೊಲೀಸರಲ್ಲಿ ಒಬ್ಬ ಸಿಬ್ಬಂದಿಯು ಆ ಮನೆಯಲ್ಲಿದ್ದ ವ್ಯಕ್ತಿಯ ಕೊರಳಪಟ್ಟಿ ಹಿಡಿದು ಜಗಳವಾಡಿದ್ದರಂತೆ. ಈ ಜಟಾಪಟಿ ಸಿಸಿಟಿವಿಯಲ್ಲೂ ಸೆರೆಯಾಗಿದೆ. ನಾವು ಯಾವುದೇ ಶಬ್ದ ಮಾಲಿನ್ಯ ಮಾಡಿಲ್ಲ. ನಸುಕಿನ 3 ಗಂಟೆ ಸಮಯದಲ್ಲಿ ಮನೆಯೊಳಗೆ ಟಿವಿ ಹಾಕಿದ್ದೇವಷ್ಟೇ. ಯಾರೋ ಕರೆ ಮಾಡಿ ಹೇಳಿದ ಕೂಡಲೇ ಸ್ಥಳಕ್ಕೆ ಬಂದು ಅನುಚಿತವಾಗಿ ವರ್ತನೆ ಮಾಡ್ತಿದ್ದಾರೆಂದು ಮಹಿಳೆ ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, wr r not safe in my house, worst countryಎಂದು ಟ್ವೀಟ್ ಮಾಡಿದ್ದಾರೆ.
ಮಹಿಳೆಯ ಈ ಟ್ವೀಟ್ಗೆ ನೆಟಿಜನ್ಸ್ ಗರಂ ಆಗಿದ್ದಾರೆ. ಆಗಿರುವ ತಪ್ಪುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕಾನೂನು ಮೂಲಕ ಹೋರಾಟ ಮಾಡಬೇಕು. ಅದನ್ನ ಬಿಟ್ಟು ದೇಶದ ಬಗ್ಗೆ ಮಾತನಾಡಿದ ಮಹಿಳೆಯ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಓದಿ:ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲು ಸಿಐಡಿ ಸಿದ್ಧತೆ