ಬೆಂಗಳೂರು: ಖಾತೆ ಹಂಚಿಕೆ ವಿಷಯದಲ್ಲಿ ಸ್ಫೋಟಗೊಂಡಿದ್ದ ಅಸಮಾಧಾನ ಬಹುತೇಕ ಶಮನವಾದಂತೆ ಕಾಣುತ್ತಿದೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ನಗು ಮುಖದಲ್ಲೇ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೆಂಗಲ್ ಗೇಟ್ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ...ನನಗೆ ಕೊಟ್ಟಿರುವ ಖಾತೆ ತೃಪ್ತಿ ನೀಡಿದೆ : ಸಚಿವ ನಿರಾಣಿ
ಸಚಿವ ಜೆ.ಸಿ. ಮಾಧುಸ್ವಾಮಿ, ಕೆ. ಗೋಪಾಲಯ್ಯ ಎಲ್ಲರೂ ಸಮಾಧಾನವಾಗಿದ್ದಾರೆ. ಯಾರಿಗೂ ಅಸಮಾಧಾನವಾಗಿಲ್ಲ. ಸ್ವಲ್ಪ ಸಣ್ಣಪುಟ್ಟ ಅಸಮಾಧಾನ ಇರಬಹುದು. ಅವರೆಲ್ಲರನ್ನೂ ಕರೆದು ನಾನು ಮಾತನಾಡುತ್ತೇನೆ. ಸಂಪುಟ ರಚಿಸುವುದು, ಖಾತೆ ಹಂಚುವುದು ಸುಲಭದ ಕೆಲಸವಲ್ಲ. ಅವರು ಸ್ವಲ್ಪ ದಿನ ಕೆಲಸ ಮಾಡಲಿ. ಆ ಇಲಾಖೆ ಸರಿಯಾಗಲಿಲ್ಲ ಅಂದರೆ ಆಮೇಲೆ ಉತ್ತಮ ಖಾತೆ ನೀಡೋಣ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರ ಮನವೊಲಿಕೆಗೆ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಅವರನ್ನು ಕಳುಹಿಸಲಾಗಿದೆ. ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಅವರು, ಎಲ್ಲವೂ ಸರಿಯಾಗಿದೆ ಎಂದಷ್ಟೇ ಹೇಳಿ ಅಲ್ಲಿಂದ ಹೊರಟರು.