ಕರ್ನಾಟಕ

karnataka

ETV Bharat / city

ದಲಿತರ ವಿಚಾರದಲ್ಲಿ congress ಗೋಮುಖ ವ್ಯಾಘ್ರ : ಛಲವಾದಿ ನಾರಾಯಣಸ್ವಾಮಿ ಆರೋಪ - ಕಾಂಗ್ರೆಸ್ ಗೋಮುಖ ವ್ಯಾಘ್ರ

ಸಿದ್ದರಾಮಯ್ಯ ದಲಿತರೆಂದರೆ ನಮಗೆ ಪ್ರಾಣ ಎಂದು ಹೇಳುತ್ತಾರೆ. ಬಾಗಲೂರಿನಲ್ಲಿ ನಡೆದ ಘಟನೆ ದಲಿತರನ್ನು ಪ್ರಾಣ ಎಂದು ತೋರಿಸಿದಂತಿದೆಯಾ? ಇದೇ ದಲಿತರಿಗೆ ಕಾಂಗ್ರೆಸ್ ಕೊಡುತ್ತಿರುವ ಗೌರವ. ಇದಕ್ಕೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಕೃಷ್ಣ ಭೈರೇಗೌಡರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು..

chalavadi narayanaswamy
ಛಲವಾದಿ ನಾರಾಯಣಸ್ವಾಮಿ

By

Published : Nov 16, 2021, 6:42 PM IST

ಬೆಂಗಳೂರು: ದಲಿತರ ವಿಚಾರದಲ್ಲಿ ಕಾಂಗ್ರೆಸ್(congress) ಒಂದು ರೀತಿಯ ಗೋಮುಖ ವ್ಯಾಘ್ರ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ (chalavadi narayanaswamy) ಆರೋಪಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಹೊರವಲಯದ ಬಾಗಲೂರು ಗ್ರಾಮ ಪಂಚಾಯತ್​​ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಡಳಿತದಲ್ಲಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು ದಲಿತರನ್ನು ಅಪಮಾನ ಮಾಡುವ ಕೆಲಸ ಮಾಡಿದ್ದಾರೆ.

ಪಂಚಾಯತ್‌ನಲ್ಲಿ ಅಧಿಕಾರ ದುರ್ಬಳಕೆಯಾಗಿ ಭ್ರಷ್ಟಾಚಾರ ಎಸಗಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಇದು ಗೊತ್ತಾದ ಕೂಡಲೇ ಸರ್ಕಾರ ಕ್ರಮ ತೆಗೆದುಕೊಂಡು ಅಧ್ಯಕ್ಷರನ್ನು ಅನರ್ಹಗೊಳಿಸುತ್ತದೆ.

ನಂತರ ಉಪಾಧ್ಯಕ್ಷೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯೆ, ತೆರವಾದ ಸ್ಥಾನಕ್ಕೆ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಆದರೆ, ನ್ಯಾಯಾಲಯಕ್ಕೆ ಹೋಗಿ ಅದಕ್ಕೆ ತಡೆ ತರುತ್ತಾರೆ.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿರುವುದು..

ವಾಪಸ್ ಬಂದ ಕೂಡಲೇ ಅವರು, ದಲಿತರು ನನ್ನ ಜಾಗದಲ್ಲಿ ಕುಳಿತರು ಎಂದು ಅಧ್ಯಕ್ಷ ಸ್ಥಾನದ ಕುರ್ಚಿಯನ್ನು ಬೀದಿಯಲ್ಲಿ ಇಟ್ಟು ತೊಳೆದು ಕಚೇರಿಯನ್ನು ಸಗಣಿಯಿಂದ ಸಾರಿಸಿ ಗೋಮೂತ್ರವನ್ನು ತಂದು ಶುದ್ಧೀಕರಣ ಮಾಡಿ ನಂತರ ಆ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ.

ಇವರು ಕೃಷ್ಣಭೈರೇಗೌಡರ ಬಲಗೈ ಬಂಟ, ಕಾಂಗ್ರೆಸ್​ನ ಮುಖಂಡ. ಇವರಿಂದ ದಲಿತರ ಅಪಮಾನ ಮಾಡುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್​ ನಾಯಕರು ಉತ್ತರಿಸಬೇಕು :ಸಿದ್ದರಾಮಯ್ಯ ದಲಿತರೆಂದರೆ ನಮಗೆ ಪ್ರಾಣ ಎಂದು ಹೇಳುತ್ತಾರೆ. ಬಾಗಲೂರಿನಲ್ಲಿ ನಡೆದ ಘಟನೆ ದಲಿತರನ್ನು ಪ್ರಾಣ ಎಂದು ತೋರಿಸಿದಂತಿದೆಯಾ? ಇದೇ ದಲಿತರಿಗೆ ಕಾಂಗ್ರೆಸ್ ಕೊಡುತ್ತಿರುವ ಗೌರವ. ಇದಕ್ಕೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಕೃಷ್ಣ ಭೈರೇಗೌಡರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷ ದಲಿತರನ್ನು ಯಾವ ರೀತಿ ಅಪಮಾನಗೊಳಿಸುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ. ಉಪಾಧ್ಯಕ್ಷೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಯಶೋದಮ್ಮ ಅವರಿಗೆ ಅಪಮಾನ ಮಾಡಿದ್ದಾರೆ. ನಾನು ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇನೆ. ಸದಸ್ಯೆ ನಿವಾಸಕ್ಕೆ ಹೋಗಿ ಸಮಾಧಾನ ಪಡಿಸಿದ್ದೇವೆ. ಪೊಲೀಸ್ ರಕ್ಷಣೆಯ ವ್ಯವಸ್ಥೆ ಮಾಡಿದ್ದೇವೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.

ಇದನ್ನೂ ಓದಿ:ಬೆಳ್ತಂಗಡಿ: ಹಳ್ಳ ದಾಟುವ ಕಾಲುಸಂಕ ರಕ್ಷಿಸಿಕೊಳ್ಳಲು ಸ್ಥಳೀಯರ ಪರದಾಟ

ಕೇರಳದ ತಿರುವನಂತಪುರದಲ್ಲಿಯೂ ದಲಿತ ಶಾಸಕರು ಕುಳಿತ ಜಾಗವನ್ನು ಕಾಂಗ್ರೆಸ್ ಯುವ ಮೋರ್ಚಾದಿಂದ ಶುದ್ಧೀಕರಣ ಮಾಡುವ ಕೆಲಸ ಮಾಡಲಾಗಿದೆ. ಮಾತೆತ್ತಿದರೆ ದಲಿತ ಪ್ರೇಮ ಎಂದು ಸುಳ್ಳು ಹೇಳಿಕೊಂಡು ಓಡಾಡುವ ಸಿದ್ದರಾಮಯ್ಯ ಇದಕ್ಕೆಲ್ಲ ಏನು ಉತ್ತರ ಕೊಡುತ್ತಾರೆ? ಕಾಂಗ್ರೆಸ್ ಗೋಮುಖ ವ್ಯಾಘ್ರವಾಗಿದೆ.

ದಲಿತರ ದಮನಕಾರಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷ ಅನಗತ್ಯವಾಗಿ ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಅಂಬೇಡ್ಕರ್ ಅವರಿಗೆ ಏನೇನು ಸಂಕಟ ಕೊಡಲಾಯಿತು, ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎನ್ನುವುದನ್ನು ಚರಿತ್ರೆ ಮಾತನಾಡುತ್ತಿದೆ. ದಲಿತ ವಿರೋಧಿ ಕಾಂಗ್ರೆಸ್ ಎಂದು ಟೀಕಿಸಿದರು.

ABOUT THE AUTHOR

...view details