ಕರ್ನಾಟಕ

karnataka

ನಮ್ಮ ಕುಟುಂಬಕ್ಕೆ ಏನಾದ್ರೂ ಆದ್ರೆ ಡಿಕೆಶಿ ಹೊಣೆ: ಸಿಡಿ ಲೇಡಿಯ ಪೋಷಕರಿಂದ ಆಕ್ರೋಶ

By

Published : Mar 27, 2021, 6:22 PM IST

Published : Mar 27, 2021, 6:22 PM IST

Updated : Mar 27, 2021, 7:54 PM IST

dkc
dkc

16:59 March 27

ಡಿಕೆಶಿ ವಿರುದ್ಧ ಆರೋಪ

ಯುವತಿಯ ಪೋಷಕರಿಂದ ಆಕ್ರೋಶ

ಬೆಂಗಳೂರು: ಹೊಲಸು ರಾಜಕಾರಣಕ್ಕೆ ನಮ್ಮ ಮಗಳನ್ನು ಬಳಸಿಕೊಂಡಿದ್ದಾರೆ. ನಮ್ಮ ಮಗಳಿಗೆ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದೇ ಡಿ.ಕೆ. ಶಿವಕುಮಾರ್ ಎಂದು ಸಿಡಿ ಪ್ರಕರಣದ ಯುವತಿಯ ತಂದೆ ಆರೋಪಿಸಿದ್ದಾರೆ.

ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಯುವತಿಯ ಪೋಷಕರು‌ ಮಾಧ್ಯಮಗಳ‌ ಮುಂದೆ ಮಾತನಾಡಿದ್ದಾರೆ.

ಯುವತಿ ತಂದೆ ಮಾತನಾಡಿ, ಸಿಡಿ ಪ್ರಕರಣದಲ್ಲಿ ಹೆಣ್ಣು‌‌ ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮೇಲೆ ಯಾವುದೇ ರಾಜಕೀಯ ಪ್ರಭಾವವಿಲ್ಲ. ಮಗಳು ನನ್ನ ಜೊತೆ ಫೋನ್​ನಲ್ಲಿ ಮಾತನಾಡುವಾಗ ಡಿ.ಕೆ.ಶಿವಕುಮಾರ್ ಮನೆಗೆ ಹೋಗ್ತಾ ಇದ್ದೇನೆ ಅಂದಿದ್ದಳು. ಅವರೇ ನನ್ನ ಮಗಳಿಗೆ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ. ನಮ್ಮ ಮಗಳನ್ನು ಕಳುಹಿಸಿ ಕೊಡಿ. ನಾನೊಬ್ಬ ಮಾಜಿ ಸೈನಿಕ. ‌‌ನನ್ನ ಮಗಳನ್ನು ರಕ್ಷಣೆ ಮಾಡೋದು ನನಗೆ ಗೊತ್ತಿದೆ‌‌. ನನ್ನ ಮಗಳಿಗೆ ಏನೇ ತೊಂದರೆಯಾದರೂ ಡಿಕೆಶಿ ಹೊಣೆ ಎಂದು ದೂರಿದರು.  

ನಮಗೆ ಪೊಲೀಸ್ ಇಲಾಖೆ ಸಾಥ್ ನೀಡಿದೆ‌‌. ಅದೇ ತರಹ ನಮಗೆ ಮಾಧ್ಯಮದವರು ಸಾಥ್ ಕೊಡಬೇಕಿದೆ. ದಯವಿಟ್ಟು ಮನೆಗೆ ಬಾ ಎಂದು ತಮ್ಮ ಮಗಳಿಗೆ ಮನವಿ ಮಾಡಿದ್ದಾರೆ‌.

ಯುವತಿ ಸಹೋದರ ಮಾತನಾಡಿ, ನಮ್ಮ ಬಳಿಯಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು‌ ತನಿಖಾಧಿಕಾರಿಗಳಿಗೆ ನೀಡಿದ್ದೇವೆ. ಸಿಡಿ ಪ್ರಕರಣ ಹೊರಬಂದ ಬಳಿಕ ಮಾ.2ರಂದು ನಮ್ಮ ಜೊತೆ ಮಾತನಾಡಿದ್ದು, ಬಿಟ್ಟರೆ ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಅಕ್ಕನಿಗೆ ರಕ್ಷಣೆ ಕೊಡುವ ವಿಚಾರದಲ್ಲಿ ನರೇಶ್ ಗೌಡ ಹೇಳಿಕೆ ಶುದ್ಧ ಸುಳ್ಳು. ಅವನು ಯಾರು ನಮ್ಮ ಅಕ್ಕನಿಗೆ ರಕ್ಷಣೆ ಕೊಡೋಕೆ‌? ನಮ್ಮ ತಂದೆ ಮಾಜಿ ಸೈನಿಕ. ದೇಶ ಕಾದೋರಿಗೆ ಮಗಳಿಗೆ ರಕ್ಷಣೆ ಕೊಡುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿಯಾದ ಬಳಿಕ ಇದೇ ಮೊದಲ ಬಾರಿಗೆ ಯುವತಿಯ ಪೋಷಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಯುವತಿ ಪೋಷಕರ ಮಾಧ್ಯಮಗೋಷ್ಟಿ ಬೆನ್ನಲ್ಲೇ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಹ ಮಾಧ್ಯಮಗಳ ಮುಂದೆ ಬಂದು, ಇಲ್ಲಿಯವರೆಗೆ ಮಹಾನಾಯಕ ಎನ್ನುತ್ತಿದ್ದ ಅವರು, ಡಿ ಕೆ ಶಿವಕುಮಾರ್​ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. 

ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಸಹ ಈ ಕುರಿತು ಪ್ರತಿಕ್ರಿಯಿಸಿ, ಯುವತಿಗೂ ಮತ್ತು ನನಗೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದಿದ್ದರು.   

ಇದನ್ನೂ ಓದಿ: ಮಹಾನಾಯಕ ಡಿಕೆಶಿ ನಾಲಾಯಕ್, ಅವನ ವಿರುದ್ಧವೇ ನೇರವಾಗಿ ದೂರು: ರಮೇಶ್ ಜಾರಕಿಹೊಳಿ

Last Updated : Mar 27, 2021, 7:54 PM IST

ABOUT THE AUTHOR

...view details