ಕರ್ನಾಟಕ

karnataka

ETV Bharat / city

ಸಿಸಿಬಿಗೆ ತಲೆನೋವಾಯ್ತು 15 ಡ್ರಗ್​​ ಟ್ಯಾಬ್ಲೆಟ್ ಲೆಕ್ಕ: ರಾ'ಗಿಣಿ'ಯ ಮಾದಕ ಮಾತ್ರೆ ರಹಸ್ಯ! - ಸಿಸಿಬಿಯಿಂದ ಮಾತ್ರ ಕುರಿತು ನಟಿ ರಾಗಿಣಿ ದ್ವಿವೇದಿ ವಿಚಾರಣೆ

ಡ್ರಗ್ಸ್​ ದಂಧೆಯ ಆರೋಪಿ ರವಿಶಂಕರ್ ಸೂಚನೆಯಂತೆ 17 ಮಾದಕ ಮಾತ್ರೆಗಳನ್ನು ಲೂಮ್ ಪೆಪ್ಪರ್​, ರಾಗಿಣಿ ಪರ್ಸನಲ್ ಡ್ರೈವರ್ ಇಮ್ರಾನ್ ಕೈಗೆ ನೀಡಿದ್ದ. ನಂತರ ಇಮ್ರಾನ್ ನಿಂದ ಆ ಟ್ಯಾಬ್ಲೆಟ್ ಪಡೆದು ತನ್ನ ಫ್ಲಾಟ್​ನಲ್ಲಿ ಡ್ರಗ್ ಸೇವನೆ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಸಿಸಿಬಿ ಬಳಿ ಇರುವ ಸಾಕ್ಷ್ಯಗಳಿಗೆ ವ್ಯತಿರಿಕ್ತವಾಗಿ ರಾಗಿಣಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ccb-inquiring-actress-ragini-dwivedi-about-mdma-drug-tables
ನಟಿ ರಾಗಿಣಿ ದ್ವಿವೇದಿ

By

Published : Sep 8, 2020, 4:51 PM IST

ಬೆಂಗಳೂರು:ನಟಿ ರಾಗಿಣಿ ದ್ವಿವೇದಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ನಶೆ ಏರಿಸುವ ಮಾದಕ ಗುಳಿಗೆ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, 15 ಟ್ಯಾಬ್ಲೆಟ್ಸ್​​ಗಳ ಲೆಕ್ಕ ಪತ್ತೆಹಚ್ಚುವುದರಲ್ಲಿ ನಿರತರಾಗಿದ್ದಾರೆ.

ಬಂಧಿತ ಲೂಮ್ ಪೆಪ್ಪರ್ ರಾಗಿಣಿಗೆ ನೀಡಿದ್ದು ಒಟ್ಟು 17 ಡ್ರಗ್ ಟ್ಯಾಬ್ಲೆಟ್ಸ್. ಆದ್ರೆ ರಾಗಿಣಿ ಹೇಳಿಕೆ ಕೊಡ್ತಿರೋದು ಕೇವಲ ‌2 ಗುಳಿಗೆಗಳ ಕುರಿತು. ಇನ್ನುಳಿದ 15 ಟ್ಯಾಬ್ಲೆಟ್ ಸೇವಿಸಿದ್ದು ಯಾರು ಎನ್ನುವ ಪ್ರಶ್ನೆ ಸಿಸಿಬಿಯನ್ನು ಕಾಡುತ್ತಿದೆ. ಸದ್ಯ 2 ಮಾತ್ರೆಯನ್ನು ನೀವು ಬಳಸಿದ್ರೆ ಉಳಿದವುಗಳನ್ನ ಯಾರಿಗೆ ನೀಡಿದ್ದಿರಾ ಎಂದು ರಾಗಿಣಿಗೆ ಸಿಸಿಬಿ ಪ್ರಶ್ನಿಸಿದೆ.

ಡ್ರಗ್ಸ್​ ಜಾಲದ ಬಂಧಿತ ಆರೋಪಿ ರವಿಶಂಕರ್ ಸೂಚನೆಯಂತೆ 17 ಟ್ಯಾಬ್ಲೆಟ್​ಗಳನ್ನ ಲೂಮ್ ಪೆಪ್ಪರ್​ನು ರಾಗಿಣಿಯ ಪರ್ಸನಲ್ ಡ್ರೈವರ್ ಇಮ್ರಾನ್ ಕೈಗೆ ನೀಡಿದ್ದ. ನಂತರ ಇಮ್ರಾನ್ ನಿಂದ ಟ್ಯಾಬ್ಲೆಟ್ ಪಡೆದು ತನ್ನ ಫ್ಲಾಟ್​ನಲ್ಲಿ ಡ್ರಗ್ ಸೇವನೆ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಸಿಸಿಬಿ ಬಳಿ ಇರುವ ಸಾಕ್ಷ್ಯಗಳಿಗೆ ವ್ಯತಿರಿಕ್ತವಾಗಿ ರಾಗಿಣಿ ಹೇಳಿಕೆ ನೀಡುತ್ತಿದ್ದಾರೆ. ಸದ್ಯ ಲೂಮ್ ಪೆಪ್ಪರ್ ಹೇಳಿಕೆಯನ್ನ ಮುಂದಿಟ್ಟು ನಟಿ ರಾಗಿಣಿಗೆ ಸಿಸಿಬಿಯಿಂದ ವಿಚಾರಣೆಯನ್ನು ತೀವ್ರಗೊಳಿಸಲಾಗ್ತಿದೆ.

ಊಟ ಕೊಟ್ಟು ಹೋದ ರಾಗಿಣಿ ತಾಯಿ

ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾಗಿಣಿಗೆ ತಾಯಿ ರೋಹಿಣಿ ದ್ವಿವೇದಿ ಬಂದು ಊಟ ಕೊಟ್ಟಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿ ರಾಗಿಣಿಯನ್ನು ಭೇಟಿ ಮಾಡಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ಪೊಲೀಸರ ಕೈಗೆ ಊಟ ಕೊಟ್ಟು ಅವರು ವಾಪಸ್​ ಹೋಗಿದ್ದಾರೆ.

ABOUT THE AUTHOR

...view details