ಬೆಂಗಳೂರು: ಇಸ್ಪೀಟ್ ಕ್ಲಬ್ ನಡೆಸುವ ಬಗ್ಗೆ ಆಡಿಯೋವೊಂದು ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಸಿಬಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ರಮೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಆರ್ಮ್ಸ್ ಕಾಯ್ದೆ 25, 3 ಹಾಗೂ ಐಪಿಸಿ ಸೆಕ್ಷನ್ 384, 420, 506b ಅಡಿ ಎಫ್‌ಐಆರ್ ದಾಖಲಾಗಿದೆ. ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್‌ವೊಂದರಲ್ಲಿ ಇಸ್ಪೀಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ ಅಡಿಗ,ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ರೈಡ್ ಮಾಡಲ್ಲ. ಇದಕ್ಕಾಗಿ ಪ್ರತಿ ತಿಂಗಳು ₹50 ಸಾವಿರ ನೀಡಬೇಕು ಎಂದು ಹೇಳಿದ್ದ.