ಕರ್ನಾಟಕ

karnataka

ETV Bharat / city

ನೇಮಕಾತಿ ಆದೇಶ ದಿಢೀರ್ ರದ್ದು ಮಾಡಿದ ಕೆಪಿಟಿಸಿಎಲ್: ಅಭ್ಯರ್ಥಿಗಳ ಪ್ರತಿಭಟನೆ

2019ರ ಮಾರ್ಚ್​ನಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗೆ ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. ಅದರಂತೆ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಆದರೆ ಆಡಳಿತಾತ್ಮಕ ಕಾರಣ ನೆಪವೊಡ್ಡಿ ದಿಢೀರ್ ಅಂತ ನೇಮಕಾತಿ ರದ್ದು ಮಾಡಲಾಗಿದೆ.

protest
ಪ್ರತಿಭಟನೆ

By

Published : Dec 7, 2020, 7:00 PM IST

Updated : Dec 7, 2020, 10:10 PM IST

ಬೆಂಗಳೂರು: ಕೆಪಿಟಿಸಿಎಲ್​ನಲ್ಲಿ ಎಂಜಿನಿಯರ್ ಆಗಬೇಕು ಅಂತ ಕನಸು ಹೊತ್ತುಕೊಂಡಿದ್ದ ನೂರಾರು ವಿದ್ಯಾರ್ಥಿಗಳ ಕನಸಿಗೆ ಕೆಪಿಟಿಸಿಎಲ್ ತಣ್ಣೀರು ಎರಚಿದೆ‌.

ನೇಮಕಾತಿ ಆದೇಶವನ್ನ ದಿಢೀರ್ ರದ್ದು ಮಾಡಿರುವ ಕೆಪಿಟಿಸಿಎಲ್ ಧೋರಣೆ ಖಂಡಿಸಿ ಇಂದು ನೂರಾರು ನೊಂದ ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಆರಂಭ ಮಾಡಿದ್ದಾರೆ. 2019ರ ಮಾರ್ಚ್​ನಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಗೆ ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿತ್ತು. ಅದರಂತೆ ವಿದ್ಯಾರ್ಥಿಗಳು ಅರ್ಜಿ ಹಾಕಿ ಎಂಜಿನಿಯರ್ ಆಗುತ್ತೇವೆ ಅಂತ ಚೆನ್ನಾಗಿ ಓದುಕೊಂಡಿದ್ದರು. ಆದರೆ ದಿಢೀರ್ ಅಂತ ಆಡಳಿತಾತ್ಮಕ ಕಾರಣ ನೆಪವೊಡ್ಡಿ ನೇಮಕಾತಿ ರದ್ದು ಮಾಡಲಾಗಿದೆ. ಇದರಿಂದ 300ಕ್ಕು ಹೆಚ್ಚು ಅಭ್ಯರ್ಥಿಗಳು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ನೇಮಕಾತಿ ಆದೇಶ ದಿಢೀರ್ ರದ್ದು ಮಾಡಿದ ಕೆಪಿಟಿಸಿಎಲ್: ಅಭ್ಯರ್ಥಿಗಳ ಪ್ರತಿಭಟನೆ

ಕೆಪಿಟಿಸಿಎಲ್ ಕೂಡಲೇ ಆದೇಶ ಹಿಂಪಡಿಯಬೇಕು. ಇಲ್ಲವಾದರೆ ಫ್ರೀಡಂ ಪಾರ್ಕ್​ನಲ್ಲಿ ವಿಷ ಕುಡಿಯುತ್ತೇವೆ ಅಂತ ನೊಂದ ಅಭ್ಯರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿ ಸರ್ಕಾರ ಹಾಗೂ ಕೆಪಿಟಿಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಆದೇಶ ಹಿಂಪಡೆಯದಿದ್ರೆ ಹೋರಾಟ ತೀವ್ರಗೊಳಿಸಲಾಗತ್ತದೆ ಎಂದು ಅಭ್ಯರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Last Updated : Dec 7, 2020, 10:10 PM IST

ABOUT THE AUTHOR

...view details