ಕರ್ನಾಟಕ

karnataka

ETV Bharat / city

ಭೂ ಸಾರಿಗೆ ಸೆಸ್ ಹೊರೆ ಸದ್ಯಕ್ಕಿಲ್ಲ: ನಿರ್ಣಯ ವಾಪಸ್​ ಪಡೆದ ಬಿಬಿಎಂಪಿ - ಭೂ ಸಾರಿಗೆ ಸೆಸ್ ಉಪ ಕರ ನಿರ್ಣಯ ವಾಪಸ್​ ಪಡೆದ ಬಿಬಿಎಂಪಿ

ಆಸ್ತಿ ತೆರಿಗೆ ಜೊತೆಗೆ ಸಿಲಿಕಾನ್ ಸಿಟಿ ನಾಗರಿಕರು ಶೇ 2 ರಷ್ಟು ಭೂ ಸಾರಿಗೆ ಉಪ ಕರ ಕಟ್ಟಬೇಕು ಎಂದು ಬಿಬಿಎಂಪಿ ನಿರ್ಣಯ ತೆಗೆದುಕೊಂಡಿತ್ತು. ವಾರ್ಷಿಕ 150 ಕೋಟಿ ರೂ. ಆದಾಯದಿಂದ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಮೇಯರ್ ನಿನ್ನೆ ಹೇಳಿಕೆ ನೀಡಿದ್ದರು. ಆದರೆ ಪಾಲಿಕೆ ಇಂದು ಈ ನಿರ್ಣಯ ಹಿಂದಕ್ಕೆ ತೆಗೆದುಕೊಂಡಿದೆ. ಇದರಿಂದ ಸಿಲಿಕಾನ್ ಸಿಟಿ ಜನರು ನಿಟ್ಟುಸಿರು ಬಿಡುವಂತಾಗಿದೆ.

BBMP
ಬಿಬಿಎಂಪಿ

By

Published : Jan 29, 2020, 2:50 PM IST

ಬೆಂಗಳೂರು: ಆಸ್ತಿ ತೆರಿಗೆ ಜೊತೆಗೆ ಸಿಲಿಕಾನ್ ಸಿಟಿ ನಾಗರಿಕರು ಶೇಕಡಾ 2 ರಷ್ಟು ಭೂ ಸಾರಿಗೆ ಉಪ ಕರ ಕಟ್ಟಬೇಕು ಎಂದು ಬಿಬಿಎಂಪಿ ನಿರ್ಣಯ ತೆಗೆದುಕೊಂಡಿತ್ತು. ವಾರ್ಷಿಕ 150 ಕೋಟಿ ರೂ. ಆದಾಯದಿಂದ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಮೇಯರ್ ನಿನ್ನೆ ಹೇಳಿಕೆ ನೀಡಿದ್ದರು. ಆದರೆ ಪಾಲಿಕೆ ಇಂದು ಈ ನಿರ್ಣಯ ಹಿಂದಕ್ಕೆ ತೆಗೆದುಕೊಂಡಿದೆ. ಇದರಿಂದ ಸಿಲಿಕಾನ್ ಸಿಟಿ ಜನರು ನಿಟ್ಟುಸಿರು ಬಿಡುವಂತಾಗಿದೆ.

ಇಂದಿನ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷದ ಸದಸ್ಯರು ಪೌರ ಸಭಾಂಗಣದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬೆಂಗಳೂರು ಜನರಿಗೆ ಹೊರೆಯಾಗಬಾರದು. ಭೂ ಸಾರಿಗೆ ಉಪ ಕರ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಅಲ್ಲದೆ ಈ ಕುರಿತು ಮೇಯರ್ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯ ಮಾಡಿದರು.

ಕೊನೆಗೂ ಸ್ಪಷ್ಟೀಕರಣ ಕೊಟ್ಟ ಮೇಯರ್ ಗೌತಮ್ ಕುಮಾರ್, ಭೂ ಸಾರಿಗೆ ಉಪ ಕರ ಜಾರಿ ಮುಂದೂಡಲಾಗಿದೆ ಎಂದರು. ಬಳಿಕ ಪ್ರತಿಭಟನೆ ಕೈ ಬಿಟ್ಟ ಕಾಂಗ್ರೆಸ್ ಪಾಲಿಕೆ ಸದಸ್ಯರು, ಕೌನ್ಸಿಲ್ ಸಭೆ ಮುಂದುವರಿಯಲು ಅನುವು ಮಾಡಿದರು.

ABOUT THE AUTHOR

...view details