ಬೆಂಗಳೂರು: ವಧು-ವರಾನ್ವೇಷಣೆಗೆ ಆನ್ಲೈನ್ ಮೊರೆ ಹೋಗುವ ಮುನ್ನ ಎಷ್ಟು ಎಚ್ಚರವಹಿಸಲೇಬೇಕು. ಯಾಕೆ ಅಂತೀರಾ ಈ ಸ್ಟೋರಿ ಓದಿ.
ಆನ್ಲೈನ್ ಮೂಲಕ ವಧು ಹುಡುಕುತ್ತಿದ್ದ ಯುವಕನನ್ನು ಐನಾತಿ ಯುವತಿ ಬೆತ್ತಲೆ ಮಾಡಿ, ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಹುಳಿಮಾವಿನಲ್ಲಿ ವಾಸವಿದ್ದ ಯುವಕ ವಂಚನೆಗೊಳಗಾದವ.
ಜೀವನ್ ಸಾತಿಯಲ್ಲಿ ತನ್ನ ಪ್ರೊಫೈಲ್ ಕ್ರಿಯೆಟ್ ಮಾಡಿದ್ದ ಯುವಕ, ವಧುಗಾಗಿ ಹುಡುಕಾಟ ನಡೆಸುತ್ತಿದ್ದಾಗ ಜೀವನಸಾತಿ ಡಾಟ್ ಕಾಮ್ ಮೂಲಕ ಯುವತಿಯ ಪರಿಚಯವಾಗಿದೆ. ಈ ವೇಳೆ ಶ್ರೇಯಾ ಎಂಬ ಯುವತಿ ತಾನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸಿಸುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಬಣ್ಣದ ಮಾತುಗಳನ್ನು ಆಡಿ, ಯುವಕನಿಗೆ ಹತ್ತಿರವಾಗಿದ್ದಳು. ನಂತರ ಇಬ್ಬರ ನಡುವೆ ಆನ್ಲೈನ್ನಲ್ಲೇ ಮದುವೆ ಪ್ರಸ್ತಾಪ ಆಗಿದೆ. ಆಗ ಯುವತಿ, ಮದುವೆಯಾಗಬೇಕೆಂದ್ರೆ ನಿನ್ನ ಬಾಡಿ ಪಾರ್ಟ್ಸ್ ಸರಿಯಾಗಿದೆಯಾ ಎಂಬುದನ್ನು ಚೆಕ್ ಮಾಡಬೇಕೆಂದು ಯುವಕನಿಗೆ ಹೇಳಿದ್ದಳು. ಅಷ್ಟೇ ಅಲ್ಲ ತನ್ನ ಅಶ್ಲೀಲ ಫೋಟೋವನ್ನು ಯುವಕನಿಗೆ ಕಳಿಸಿದ್ದಳು.
ಇದನ್ನು ನಂಬಿದ ಯುವಕ, ತನ್ನ ಬೆತ್ತಲೆ ವಿಡಿಯೋವನ್ನು ಯುವತಿಗೆ ಕಳುಹಿಸಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಯುವತಿ ಕರೆ ಮಾಡಿ, 1 ಲಕ್ಷ ಹಣ ಕೊಡು ಇಲ್ಲದಿದ್ದರೆ ನಿನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾಳೆ.
ಯುವಕ ಹೆದರಿ ಫೋನ್ ಪೇ ಮೂಲಕ ಹಣ ಕಳಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಯುವತಿ, ಮತ್ತಷ್ಟು ಹಣ ನೀಡುವಂತೆ ವಾಟ್ಸಾಪ್ ಮೂಲಕ ಟಾರ್ಚರ್ ಕೊಟ್ಟಿದ್ದಾಳೆ. ಆ ಬಳಿಕ ಯುವಕ, ಹುಳಿಮಾವು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.