ಕರ್ನಾಟಕ

karnataka

ETV Bharat / city

ಬಲವಂತದ ಮತಾಂತರ ಮಾಡುವವರಿಗೆ ನೀವೇಕೆ ಬಲ ತುಂಬುತ್ತಿದ್ದೀರಿ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಮತಾಂತರ ನಿಷೇಧ ಕಾಯ್ದೆ ಕುರಿತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಸರಣಿ ಟ್ವೀಟ್​ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

bjp tweet against congress
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್​​

By

Published : Dec 9, 2021, 12:59 PM IST

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಕುರಿತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಸರಣಿ ಟ್ವೀಟ್​ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಬಲವಂತದ ಮತಾಂತರ ಮಾಡುವವರಿಗೆ ನೀವೇಕೆ ಬಲ ತುಂಬುತ್ತಿದ್ದೀರಿ? ಎಂದು ಪ್ರಶ್ನಿಸಿದೆ.

ಮತಾಂತರ ಮಾಡದವರು ಮತಾಂತರ ವಿರೋಧಿ ಕಾಯ್ದೆಗೆ ಭಯ ಪಡಬೇಕಾಗಿಲ್ಲ. ಬಲವಂತದ ಮತಾಂತರ ಮಾಡುವವರಿಗೆ ಈ ಕಾನೂನಿನ ಭಯ ಮೂಡುವುದು ಸಹಜ. ಕಾಂಗ್ರೆಸ್ ಪಕ್ಷದ ನಾಯಕರಲ್ಲೂ ಭಯ ಮೂಡಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಸಿದ್ದರಾಮಯ್ಯನವರೇ, ಸಂವಿಧಾನಕ್ಕೆ ವಿರುದ್ಧವಾಗಿ ಬಲವಂತದ ಮತಾಂತರ ಮಾಡುವವರಿಗೆ ನೀವೇಕೆ ಬಲ ತುಂಬುತ್ತಿದ್ದೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರೇ, ನಿಮ್ಮ ಉದ್ದೇಶ ಏನೆಂಬುದು ಈಗ ಸ್ಪಷ್ಟವಾಯ್ತು. ಎಲ್ಲರಿಗೂ ತಾವು ಇಷ್ಟಪಟ್ಟ ಧರ್ಮ ಅನುಸರಣೆ ಮಾಡುವುದಕ್ಕೆ ಸಂವಿಧಾನ ಅವಕಾಶ ನೀಡಿರುವುದು ನಿಜ. ಆದರೆ ಬಲವಂತ ಅಥವಾ ಹುಸಿ ಭರವಸೆಯ ಮೂಲಕ ಮತಾಂತರ ಮಾಡುವುದಕ್ಕಲ್ಲ. ಮತಾಂತರ ನಿಷೇಧ ಕಾಯ್ದೆಯಿಂದ ಯಾರಿಗೋ ಬೇಸರವಾಗಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆಗೆ ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಶಾಂತಿಯನ್ನೇ ಕದಡಿದ ಸಿದ್ದರಾಮಯ್ಯನವರು ಈಗ ಕೋಮು ಸೌಹಾರ್ದತೆಯ ಬಗ್ಗೆ ಪಾಠ ಮಾಡುವುದು ಸೋಜಿಗವಲ್ಲವೇ? ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ:ಜೀವ ಕೈಯಲ್ಲಿ ಹಿಡಿದು ದಿನನಿತ್ಯ ರೈಲ್ವೆ ಹಳಿ ದಾಟುವ ಶಾಲಾ ಮಕ್ಕಳು: ಬೇಕಿದೆ ಪರಿಹಾರ

ಸಿದ್ದರಾಮಯ್ಯನವರೇ, ಬಲವಂತದ ಮತಾಂತರ ಸಮಾಜ ಹಾಗೂ ಕುಟುಂಬವನ್ನು ಹೇಗೆ ಛಿದ್ರಗೊಳಿಸುತ್ತದೆ ಎಂಬುದು ನಿಮಗೆ ತಿಳಿಯದ ವಿಚಾರವೇನಲ್ಲ, ಆದರೂ ಜಾಣ ಕುರುಡುತನವೇಕೆ? ಚಿತ್ರದುರ್ಗ ಜಿಲ್ಲೆಯ ಶಾಸಕರ ತಾಯಿಯನ್ನೇ ಹುಸಿ ಮಾತಿನಿಂದ ಮತಾಂತರಗೊಳಿಸಿದ ವಿಚಾರ ಸದನದಲ್ಲಿ ಪ್ರಸ್ತಾಪವಾದಾಗ ತಾವು ಜಾಗೃತರಾಗಿ ಕೇಳಿಸಿಕೊಂಡಿದ್ದೀರಿ ತಾನೇ? ಎಂದು ಬಿಜೆಪಿ ಪ್ರಶ್ನಿಸಿದೆ.

ABOUT THE AUTHOR

...view details