ಬೆಂಗಳೂರು: ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) 24x7 ಸಹಾಯವಾಣಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಬೆಸ್ಕಾಂ ಸಹಾಯವಾಣಿ ಸಿಬ್ಬಂದಿಗೆ ಕೊರೊನಾ : 48 ಗಂಟೆಗಳ ಕಾಲ '1912' ಬಂದ್ - ಬೆಸ್ಕಾಂ ಸಹಾಯವಾಣಿ ಸಿಬ್ಬಂದಿಗೆ ಕೋವಿಡ್
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ 24x7 ಸಹಾಯವಾಣಿ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮುಂದಿನ 48 ಗಂಟೆಗಳ ಕಾಲ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ
ಬೆಸ್ಕಾಂ ಸಹಾಯವಾಣಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ 1912 ಸಹಾಯವಾಣಿ ಸಂಪೂರ್ಣವಾಗಿ ಸ್ಥಗಿತವಾಗಿರುತ್ತದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ.