ಬೆಂಗಳೂರು: ಕಳೆದ ಬಾರಿ ಹೈಕೋರ್ಟ್ ಬೃಹತ್ ನೀರು ಕಾಲುವೆ ವಿಚಾರದ ಕುರಿತು ನೀಡಿದ ಆದೇಶವನ್ನು ಸರ್ಕಾರ ಪಾಲಿಸದೇ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿಬಂದಿದೆ.
ಬಿಬಿಎಂಪಿ ಸ್ಟಾರ್ಮ್ ವಾಟರ್ ಡ್ರೈನ್ ವಿಚಾರ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ - ಬೆಂಗಳೂರು ಸ್ಟಾರ್ಮ್ ವಾಟರ್ ಡ್ರೈನ್
ಕಳೆದ ಬಾರಿ ಹೈಕೋರ್ಟ್ ಬೃಹತ್ ನೀರು ಕಾಲುವೆ ವಿಚಾರದ ಕುರಿತು ನೀಡಿದ ಆದೇಶವನ್ನು ಸರ್ಕಾರ ಪಾಲಿಸದೇ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು, ಸ್ಟಾರ್ಮ್ ವಾಟರ್ ಡ್ರೈನ್ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಬಿಬಿಎಂಪಿಗೆ ತಿಳಿಸಲಾಗಿತ್ತು. ಆದ್ರೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ 4 ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಹೈಕೋರ್ಟ್ ಗಡುವು ನೀಡಿದೆ.
ಇನ್ನು ಎನ್‌ಜಿಟಿ ಆದೇಶ ಪಾಲಿಸುವಂತೆ ಕೆಎಸ್‌ಪಿಸಿಬಿ, ಬಿಬಿಎಂಪಿಗೆ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಎನ್‌ಜಿಟಿ ಆದೇಶವನ್ನು ನಮ್ಮ ನಗರದಲ್ಲೂ ಪಾಲಿಸಬಹುದೇ? ಇದರಿಂದಾಗುವ ಪರಿಣಾಮ ಏನು? ಎಂದು ತಜ್ಞರ ಸಲಹೆಯನ್ನು ಬಿಬಿಎಂಪಿ ಪಡೆದಿದೆಯಾ ಎನ್ನುವ ಕುರಿತು ವಿವರ ನೀಡುವಂತೆ ತಿಳಿಸಿ ಡಿಸೆಂಬರ್ 16 ಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.