ಕರ್ನಾಟಕ

karnataka

ETV Bharat / city

ನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿ ನಾಲ್ವರಿಗೆ ಬರಗೂರು ಪ್ರಶಸ್ತಿ - ಕನ್ನಡ ಸಾಹಿತ್ಯ

2020 ಮತ್ತು 2021ನೇ ಸಾಲಿನ 'ಬರಗೂರು ಪ್ರಶಸ್ತಿ' ಪುರಸ್ಕೃತರ ಹೆಸರುಗಳನ್ನು ನಾಡೋಜ ಬರಗೂರು ಪ್ರತಿಷ್ಠಾನವು ಪ್ರಕಟಿಸಿದೆ.

baraguru-award-announced-for-four-members-including-girish-kasaravalli
ನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿ ನಾಲ್ವರಿಗೆ ಬರಗೂರು ಪ್ರಶಸ್ತಿ

By

Published : Oct 19, 2021, 2:25 AM IST

ಬೆಂಗಳೂರು:ಕನ್ನಡ ಸಿನಿಮಾ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಬರಗೂರು ಪ್ರಶಸ್ತಿ ಘೋಷಣೆಯಾಗಿದೆ.

ನಾಡೋಜ ಬರಗೂರು ಪ್ರತಿಷ್ಠಾನವು ಬರಗೂರರ ಸೃಜನಶೀಲ ಕ್ಷೇತ್ರಗಳಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದ ಒಬ್ಬರಿಗೆ ಪ್ರತಿ ವರ್ಷವೂ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಈಗ 2020 ಮತ್ತು 2021ನೇ ಸಾಲಿನ 'ಬರಗೂರು ಪ್ರಶಸ್ತಿ' ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದೆ.

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಗಿರೀಶ್ ಕಾಸರವಳ್ಳಿ, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಸಾರಾ ಅಬೂಬಕರ್ ಅವರು 2020ರ 'ಬರಗೂರು ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿ ನಾಲ್ವರಿಗೆ ಬರಗೂರು ಪ್ರಶಸ್ತಿ

ಸಿನಿಮಾ ಗೀತಗಾಯನ ಹಾಗೂ ಸುಗಮ ಸಂಗೀತ ಖ್ಯಾತಿಯ ಬಿ.ಕೆ ಸುಮಿತ್ರ ಮತ್ತು ಮರಾಠಿಯಿಂದ ಕನ್ನಡಕ್ಕೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಭಾಷಾಂತರ ಮಾಡಿದ ಚಂದ್ರಕಾಂತ ಪೋಕಳೆಯವರು 2021ರ ಬರಗೂರು ಪ್ರಶಸ್ತಿಗೆ ಘೋಷಣೆಯಾಗಿದ್ದಾರೆ.

ಬರಗೂರು ಪ್ರಶಸ್ತಿಯು ತಲಾ 25 ಸಾವಿರ ರೂಪಾಯಿಗಳನ್ನು ಒಳಗೊಂಡಿದ್ದು, ಪ್ರಶಸ್ತಿ ಫಲಕದೊಂದಿಗೆ ಅಭಿನಂದಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಅಕ್ಟೋಬರ್ 30ರ ಸಂಜೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸುವೆ.. ಕೇಂದ್ರ ವಾರ್ತಾ & ಪ್ರಸಾರ ಸಚಿವ ಡಾ ಎಲ್ ಮುರುಗನ್ ಭರವಸೆ..

ABOUT THE AUTHOR

...view details