ಬೆಂಗಳೂರು: ಅಣ್ಣಾಮಲೈ ಸ್ಥಾನಕ್ಕೆ ನೂತನವಾಗಿ ನೇಮಕವಾಗಿರುವ ದಕ್ಷಿಣ ವಿಭಾಗದ ಡಿಸಿಪಿ ಲೇಡಿ ಸಿಂಗಂ ರೋಹಿಣಿ ಕಟೋಚ್ ಸಪೆಟ್, ರೌಡಿಗಳಿಗೆ ಚಳಿ ಬೀಡಿಸಿದ್ದಾರೆ. ಇವತ್ತು ನಡೆದ ರೌಡಿಗಳ ಪರೇಡ್ನಲ್ಲಿ ದಕ್ಷಿಣ ವಿಭಾಗದ 206 ರೌಡಿಶೀಟರ್ಗಳು ಭಾಗಿಯಾಗಿದ್ರು.
ರೌಡಿಶೀಟರ್ಗಳ ಚಳಿ ಬಿಡಿಸಿದ ಲೇಡಿ ಸಿಂಗಂ ರೋಹಿಣಿ ಕಟೋಚ್! - ರೌಡಿಗಳಿಗೆ ಕ್ಲಾಸ್
ಅಣ್ಣಾಮಲೈ ಸ್ಥಾನಕ್ಕೆ ನೂತನವಾಗಿ ನೇಮಕವಾಗಿರುವ ದಕ್ಷಿಣ ವಿಭಾಗದ ಡಿಸಿಪಿ ಲೇಡಿ ಸಿಂಗಂ ರೋಹಿಣಿ ಕಟೋಚ್ ಸಪೆಟ್, ರೌಡಿಗಳಿಗೆ ಚಳಿ ಬೀಡಿಸಿದ್ದಾರೆ. ಇವತ್ತು ನಡೆದ ರೌಡಿಗಳ ಪರೇಡ್ನಲ್ಲಿ ದಕ್ಷಿಣ ವಿಭಾಗದ 206 ರೌಡಿಶೀಟರ್ಗಳು ಭಾಗಿಯಾಗಿದ್ರು.
ಈ ವೇಳೆ ರೌಡಿಶೀಟರ್ಗಳ ಪ್ರಸ್ತುತ ವೃತ್ತಿ, ಆದಾಯದ ಮೂಲ ಸೇರಿದಂತೆ ಅಪರಾಧ ಚುಟುವಟಿಕೆಗಳ ಬಗ್ಗೆ ವಿವರಣೆ ಪಡೆದುಕೊಂಡರು. ನಂತರ, ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಡಿಸಿಪಿ ರೋಹಿಣಿ, ಅಪರಾಧ ಚಟುವಟಿಕೆಗಳಲ್ಲಿ ಇನ್ಮುಂದೆ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇತ್ತಿಚಿಗೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆದು ಆಯಾ ವಿಭಾಗದಲ್ಲಿ ಡಿಸಿಪಿಗಳು ಕ್ರೈಂ ಕಂಟ್ರೋಲ್ ತಗೋಬೇಕು ಎಂದು ಎಚ್ಚರಿಕೆ ನೀಡಿದ್ರು. ಅಷ್ಟೇ ಅಲ್ಲದೆ, ಕ್ರಿಮಿನಲ್ ಚಟುವಟಿಕೆಯಲ್ಲಿ ಯಾರೂ ಭಾಗಿಯಾಗದ ರೀತಿ ವಾರ್ನ್ ಮಾಡಬೇಕು. ಒಂದು ವೇಳೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ್ರೆ ಮುಲಾಜಿಲ್ಲದೆ ರೌಡಿ ಪಟ್ಟಿ ತೆರೆಯಿರಿ ಎಂದು ಎಚ್ಚರಿಕೆ ನೀಡಿದ್ರು. ಹೀಗಾಗಿ ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಅಧಿಕಾರಿಗಳು ಆಲರ್ಟ್ ಆಗಿದ್ದು, ರೌಡಿಗಳಿಗೆ ಸರಿ ದಾರಿ ತೋರುವುದಕ್ಕೆ ಶುರು ಮಾಡಿದ್ದಾರೆ.