ಕರ್ನಾಟಕ

karnataka

ETV Bharat / city

ಮಿಂಟೋ ವೈದ್ಯರ ಮೇಲೆ ಹಲ್ಲೆ ಪ್ರಕರಣ: 11 ಜನ ಕರವೇ ಮಹಿಳಾ ಕಾರ್ಯಕರ್ತರಿಗೆ ಜಾಮೀನು - ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ಪ್ರಕರಣ

ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ 11 ಜನ ಕಾರ್ಯಕರ್ತರಿಗೆ 24ನೇ ಎಸಿಎಂಎಂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಕರವೇ

By

Published : Nov 8, 2019, 6:58 PM IST

ಬೆಂಗಳೂರು:ಮಿಂಟೋ ಆಸ್ಪತ್ರೆವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇರೆಗೆ ಬಂಧಿತರಾದ ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ 11 ಜನ ಕಾರ್ಯಕರ್ತರಿಗೆ 24ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

11 ಜನ ಕರವೇ ಮಹಿಳಾ ಕಾರ್ಯಕರ್ತರಿಗೆ ಜಾಮೀನು

ವಿವಿಪುರಂ ಪೊಲೀಸರು ಕಿಮ್ಸ್ ವೈದ್ಯಕೀಯ ಪರೀಕ್ಷೆಗೆ ಕರವೇ ಕಾರ್ಯಕರ್ತರನ್ನ ಒಳಪಡಿಸಿ, ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಕಾರ್ಯಕರ್ತರ ಪರ ವಕೀಲರು ವಾದ ಮಂಡಿಸಿ,‌ ಸೆಕ್ಷನ್ 436ರ ಅಡಿ ಜಾಮೀನು ನೀಡಲು ಅವಕಾಶವಿದೆ, ಇದು ಕೃತ್ಯ ಜಾಮೀನು ನೀಡುವಂತಹ ಕೃತ್ಯವಾಗಿದೆ ಎಂದು ವಾದ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ 50 ಸಾವಿರ ರೂ. ಖಾಸಗಿ ಬಾಂಡ್​ ಹಾಗೂ ನಗದು ಶ್ಯೂರಿಟಿ 3000 ಕಟ್ಟುವಂತೆ ಸೂಚಿಸಿ ಜಾಮೀನು ನೀಡಿದರು.

ಪ್ರಕರಣ ಹಿನ್ನೆಲೆ:

ಕನ್ನಡದಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇರೆಗೆ ಕರವೇ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ 11 ಜನ ಕಾರ್ಯಕರ್ತರು ದಕ್ಷಿಣಾ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿ ಪುರ ಪೊಲೀಸ್ ಠಾಣೆಗೆ ಶರಣಾಗತಿಯಾಗಿದ್ದರು. ಇವರ ವಿರುದ್ಧ ಐಪಿಸಿ ಸೆಕ್ಷನ್ 504 - ಸಾರ್ವಜನಿಕ ಶಾಂತಿ ಭಂಗ ಹಾಗೂ ಉದ್ದೇಶ ಪೂರ್ವಕ ಅವಮಾನ (ಜಾಮೀನು ರಹಿತ) ಸೆ. 506 - ಜೀವ ಬೆದರಿಕೆ (ಇದು ಜಾಮೀನು ರಹಿತ), ಸೆ. 341 - ಒಬ್ಬ ವ್ಯಕ್ತಿಯನ್ನ ಸುತ್ತುವರಿಯುವುದು, ಸೆ.149- ಗುಂಪಾಗಿ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡುವುದು ( ಬೇಲ್ ಸಹಿತ), ಸೆ.323- ಸ್ವಯಂ ಪ್ರೇರಣೆಯಿಂದ ವ್ಯಕ್ತಿಯನ್ನ ಗಾಯ ಪಡಿಸುವುದು, ಸೆ.353- ಸಾರ್ವಜನಿಕ ಸೇವಕರ ಅಥವಾ ಸಾರ್ವಜನಿಕ ಅಧಿಕಾರಿಗೆ ಅಡ್ಡಿ ಪಡಿಸುವುದು, ಇವುಗಳ ಅಡಿಯಲ್ಲಿ ಕೇಸ್​​ ದಾಖಲಾಗಿತ್ತು.

ABOUT THE AUTHOR

...view details