ಬೆಂಗಳೂರು:ಲೋಕಸಭೆ ಅಧಿವೇಶನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯುಸಿಯಾಗಿರುವ ಕಾರಣ ಕೆಲ ದಿನಗಳ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಸಂಪುಟದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವೆಲ್ಲರೂ ಒಟ್ಟಿಗೆ ಇದ್ದೇವೆ: ಸೋಮಶೇಖರ್
ಲೋಕಸಭೆ ಅಧಿವೇಶನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯುಸಿಯಾಗಿರುವ ಕಾರಣ ಕೆಲ ದಿನಗಳ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವೆಲ್ಲರೂ ಒಟ್ಟಿಗೇ ಇದ್ದೇವೆ: ಎಸ್.ಟಿ.ಸೋಮಶೇಖರ್
ಗೆದ್ದ ಎಲ್ಲ ಶಾಸಕರಿಗೂ ಹಾಗೂ ಸೋತವರಿಗೂ ಸೂಕ್ತ ಸ್ಥಾನಮಾನ ನೀಡುವ ವಿಚಾರವಾಗಿ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದಾರೆ. ನಾವೆಲ್ಲರೂ ಒಟ್ಟಿಗೇ ಇದ್ದೇವೆ ಯಾವುದೇ ಬೇಡಿಕೆ ಮನಸ್ತಾಪಗಳಿಲ್ಲ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಲು ಬಂದಿದ್ದೇವೆ ಎಂದರು. ನಾವು ಖಾತೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಯಾರು ಕೂಡ ಇದೇ ಖಾತೆ ನೀಡಿ ಎಂದು ಪಟ್ಟು ಹಿಡಿದಿಲ್ಲ ಕೇವಲ ಅಭಿನಂದನೆ ಸಲ್ಲಿಸಲು ಮಾತ್ರ ಬಂದಿದ್ದೇವೆ ಖಾತೆಗಳಿಗಾಗಿ ಯಾರು ಪೈಪೋಟಿಗೆ ಹೋಗುವುದಿಲ್ಲ ಎಂದರು.