ಕರ್ನಾಟಕ

karnataka

ETV Bharat / city

ʻಮನೆಮನೆಗೆ ಕೇಜ್ರಿವಾಲ್‌ ಮಾದರಿ ಅಭಿಯಾನ'ಕ್ಕೆ ಆಮ್‌ ಆದ್ಮಿ ಪಕ್ಷ ಸಿದ್ಧತೆ - ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ

'ಮನೆಮನೆಗೆ ಕೇಜ್ರಿವಾಲ್‌ ಮಾದರಿ' ಅಭಿಯಾನದ ಮೂಲಕ ಆಮ್‌ ಆದ್ಮಿ ಪಕ್ಷದ ಸಾಧನೆಗಳನ್ನು ಬೆಂಗಳೂರಿನ ಜನತೆಗೆ ತಲುಪಿಸಲು ಸಿದ್ಧತೆ ನಡೆಸಲಾಗುತ್ತಿದೆ.

AAP
AAP

By

Published : May 29, 2022, 10:33 AM IST

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಆಮ್‌ ಆದ್ಮಿ ಪಾರ್ಟಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದ್ದು, 'ಮನೆಮನೆಗೆ ಕೇಜ್ರಿವಾಲ್‌ ಮಾದರಿ' ಅಭಿಯಾನದ ಮೂಲಕ ಪಕ್ಷದ ಸಾಧನೆಗಳನ್ನು ರಾಜಧಾನಿಯ ಜನತೆಗೆ ತಲುಪಿಸಲಾಗುತ್ತದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ ಆವರಣದಲ್ಲಿ ನಡೆದ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ. ಬೆಂಗಳೂರಿನ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕಸ ಸಂಗ್ರಹಣಾ ವ್ಯವಸ್ಥೆ, ಬೀದಿ ದೀಪಗಳು, ಪಾದಚಾರಿ ಮಾರ್ಗ ಮುಂತಾದ ಮೂಲಸೌಕರ್ಯಗಳನ್ನು ಆಮ್‌ ಆದ್ಮಿ ಪಾರ್ಟಿಯು ಉತ್ತಮ ಗುಣಮಟ್ಟದಲ್ಲಿ ಕಲ್ಪಿಸಬಲ್ಲದು. 40% ಹಣವನ್ನು ಕೊಳ್ಳೆ ಹೊಡೆಯುವ ಬಿಜೆಪಿಯಿಂದ ಗುಣಮಟ್ಟದ ಮೂಲಸೌಕರ್ಯ ಸಾಧ್ಯವಿಲ್ಲ ಎಂದು ಹೇಳಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ಹಾಗೂ ಎಎಪಿ ಮುಖಂಡರಾದ ಭಾಸ್ಕರ್‌ ರಾವ್‌ ಮಾತನಾಡಿ, 2020ರಲ್ಲಿ ನಡೆಯಬೇಕಾದ ಚುನಾವಣೆ ಎರಡು ವರ್ಷ ತಡವಾಗಿ ನಡೆಯುತ್ತಿದೆ. ಕಾರ್ಪೋರೇಟರ್‌ಗಳಿಲ್ಲದ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ರಾಜ್ಯ ಸರ್ಕಾರ ಹಾಗೂ ಶಾಸಕರು ಹಲವು ರೀತಿಯ ಅಕ್ರಮ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ಕಾರ್ಪೊರೇಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ, ಬಿಬಿಎಂಪಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂಬ ವಿಶ್ವಾಸವಿದೆ. ಈ ಮೂಲಕ ಹದಗೆಟ್ಟಿರುವ ಬಿಬಿಎಂಪಿ ಆಡಳಿತವು ಸರಿ ದಾರಿಗೆ ಬರಲಿದೆ ಎಂದು ಹೇಳಿದರು.

ವಾರ್ಡ್ ಸಮಿತಿ ಸಮರ್ಪಕವಾಗಿ ಜಾರಿ: ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, ವಾರ್ಡ್‌ ಸಮಿತಿಗಳನ್ನು ಸಮರ್ಪಕವಾಗಿ ಜಾರಿಗೆ ತಂದು, ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವ ಗುರಿಯನ್ನು ಎಎಪಿ ಇಟ್ಟುಕೊಂಡಿದೆ. ಬೆಂಗಳೂರಿಗಾಗಿ ಪಕ್ಷವು ಕಳೆದ ಹಲವು ವರ್ಷಗಳಿಂದ ಅನೇಕ ಹೋರಾಟಗಳನ್ನು ನಡೆಸಿದೆ. ಇದರಿಂದಾಗಿ ಆಡಳಿತ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ, ಕಾರ್ಯಕರ್ತರು ಪೊಲೀಸ್‌ ಕೇಸ್​ಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ರಾಜಧಾನಿಯ ಹಿತಕ್ಕಾಗಿ ಪಕ್ಷವು ಎಂತಹ ಸಾಹಸ ಹಾಗೂ ತ್ಯಾಗಕ್ಕೂ ಸಿದ್ಧವಿದೆ ಎಂದು ಹೇಳಿದರು.

ಇದನ್ನೂ ಓದಿ:89ನೇ ಆವೃತ್ತಿಯ ಮನ್ ಕಿ ಬಾತ್: ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ ಭಾಷಣ

ABOUT THE AUTHOR

...view details