ಬೆಂಗಳೂರು :ಚಳಿಗಾಲ ಬಂತೆಂದರೆ ಜ್ವರ, ಶೀತ ಹೀಗೆ ಹಲವಾರು ರೋಗಗಳು ಕಂಡು ಬರುವುದು ಸರ್ವೇ ಸಾಮಾನ್ಯ. ಅದರಲ್ಲೂ ಈಗ ಕೋವಿಡ್ ಭೀತಿ ಬೇರೆ. ಹೀಗಿರುವಾಗ ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಬೆಚ್ಚಗಿನ ಉಡುಪುಗಳಿಗೆ ಬೇಡಿಕೆ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ.
ರಾಜಧಾನಿಯಲ್ಲಿ ಕುಸಿದ ಬೆಚ್ಚನೆ ಉಡುಪುಗಳ ಬೇಡಿಕೆ - winter
ಚಳಿಗಾಲ ಬರುತ್ತಿದ್ದ ಹಾಗೆ ಬೆಚ್ಚನೆಯ ಉಡುಪುಗಳನ್ನು ಕೊಳ್ಳಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದ ಜನರು, ಕೊರೊನಾ ಭಯದಿಂದ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಹೀಗಾಗಿ, ಬೆಚ್ಚಗಿನ ಉಡುಪುಗಳಿಗೆ ಬೇಡಿಕೆ ಕೊಂಚ ಮಟ್ಟಿಗೆ ತಗ್ಗಿದೆ..
ರಾಜಧಾನಿಯಲ್ಲಿ ಕುಸಿದ ಬೆಚ್ಚನೆ ಉಡುಪುಗಳ ಬೇಡಿಕೆ
ಸಣ್ಣ ಕೆಮ್ಮು ಬಂದರೂ ಜನರಲ್ಲಿ ಕೊರೊನಾ ಎಂಬ ಭಯ ಶುರುವಾಗುತ್ತದೆ. ಚಳಿಗಾಲ ಬರುತ್ತಿದ್ದ ಹಾಗೆ ಜನರು ಬೆಚ್ಚನೆ ಉಡುಪುಗಳನ್ನು ಕೊಳ್ಳಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದರು. ಆದರೆ, ಕೊರೊನಾ ಭಯದಿಂದ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಶೇ.40ರಷ್ಟು ವ್ಯಾಪಾರ ಇಳಿದಿದೆ ಎಂದು ಸ್ವೆಟರ್ ಅಂಗಡಿ ಮಾಲೀಕರು ತಿಳಿಸಿದರು.