ಕರ್ನಾಟಕ

karnataka

By

Published : Jul 29, 2022, 2:46 PM IST

ETV Bharat / city

17 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ‌ ನೆಲೆಸಿದ್ದ ವಿದೇಶಿ‌‌ ಪ್ರಜೆ ಗಡಿಪಾರು

2006 ರಲ್ಲಿ ಈತನಿಗೆ ಅನಧಿಕೃತ ವಾಸ ಹಿನ್ನೆಲೆಯಲ್ಲಿ ಆರು ತಿಂಗಳ ಸಜೆಯಾಗಿತ್ತು. ದೇಶ ಬಿಟ್ಟು ಹೋಗುವಂತೆ ನೋಟಿಸ್ ಜಾರಿ ಮಾಡಿದ್ದರೂ‌ ಅಕ್ರಮವಾಗಿ ಇಲ್ಲೇ‌ ಉಳಿದುಕೊಂಡಿದ್ದನು.

exiled Bosco Kawesi
ಗಡಿಪಾರಾದ ಆರೋಪಿ ಬೋಸ್ಕೋ ಕಾವೇಸಿ

ಬೆಂಗಳೂರು :ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆಗಳ ವೀಸಾ ಹಾಗೂ ಪಾಸ್ ಪೋರ್ಟ್ ನವೀಕರಿಸಲು ಸಹಕರಿಸಿ ಭಾರತದಲ್ಲಿ ಸುಮಾರು 17 ವರ್ಷಗಳಿಂದ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಉಗಾಂಡ ದೇಶದ ಪ್ರಜೆಯನ್ನು ಗಡಿಪಾರು ಮಾಡಲಾಗಿದೆ‌. ಬೋಸ್ಕೋ ಕಾವೇಸಿ ಗಡಿಪಾರಾದ ಉಗಾಂಡ ಮೂಲದ ಅರೋಪಿಯಾಗಿದ್ದಾನೆ‌ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

1995ರಲ್ಲಿ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬೋಸ್ಕೋ ಕಾವೇಸಿ ಬಂದಿದ್ದ. ಇವರ ವೀಸಾ ಅವಧಿ 2005ರಲ್ಲಿ ಮುಗಿದರೂ ಅಕ್ರಮವಾಗಿ ಭಾರತದಲ್ಲಿ ವಾಸವಾಗಿದ್ದ. 2006 ರಲ್ಲಿ ಆರೋಪಿಗೆ ಅನಧಿಕೃತ ವಾಸ ಹಿನ್ನೆಲೆಯಲ್ಲಿ ಆರು ತಿಂಗಳ ಸಜೆಯಾಗಿತ್ತು. ದೇಶ ಬಿಟ್ಟು ಹೋಗುವಂತೆ ನೋಟಿಸ್ ಜಾರಿ ಮಾಡಿದ್ದರೂ‌ ಅಕ್ರಮವಾಗಿ ಇಲ್ಲೇ‌ ಉಳಿದುಕೊಂಡಿದ್ದ.

ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಈತ ಭಾರತೀಯ ಯುವತಿಯನ್ನು ಮದುವೆಯಾಗಿರುವುದಾಗಿ ಹೇಳಿ ಇಲ್ಲಿ ನೆಲೆಸಲು ಅವಕಾಶ ಕೋರಿದ್ದನು. ವಿಚಾರಣೆ ನಡೆಸಿದ್ದ ಕೋರ್ಟ್ 2022 ರಲ್ಲಿ ಈತನ ಅರ್ಜಿ ತಿರಸ್ಕೃತಗೊಳಿಸಿತ್ತು. ಈ ಸಂಬಂಧ ವಿದೇಶಿ ನೋಂದಣಿ‌ ಕೇಂದ್ರ(ಎಫ್ಐಆರ್​ಓ) ಕೇಂದ್ರ ಗೃಹ ಸಚಿವಾಲಯಕ್ಕೆ‌ ನೀಡಿದ ಮಾಹಿತಿ ಮೇರೆಗೆ ದೆಹಲಿ ಇಮಿಗ್ರೇಷನ್‌ ಅಧಿಕಾರಿಗಳು ಜುಲೈ 19ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಬಾಣಸವಾಡಿ ಪೊಲೀಸರ ಸಹಾಯದಿಂದ ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲಿಸಿದಾಗ ದೊರೆತ 26 ವಿದೇಶಿಯರ ಪಾಸ್ ಪೋರ್ಟ್​ಗಳನ್ನ ಜಪ್ತಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ವೈಯಕ್ತಿಕ ಲಾಭಕ್ಕಾಗಿ ವಿದೇಶಿಯರಿಗೆ ಅನುಕೂಲ‌ ಮಾಡಿಕೊಡುವುದಾಗಿ ನಟಿಸಿ ಅನಗತ್ಯವಾಗಿ ಅವರಿಂದ ಹಣ ಪಡೆಯುತ್ತಿದ್ದನು. ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ನಕಲಿ ದಾಖಲಾತಿ ನೀಡುತ್ತಿದ್ದ‌ನು. ಮಾನವ ಕಳ್ಳಸಾಗಣೆ, ಬಲವಂತವಾಗಿ ಹಣ‌ ಪಡೆಯುವುದು, ವಂಚನೆ ಸೇರಿದಂತೆ ಕಾನೂನುಬಾಹಿರವಾಗಿ ಚಟುವಟಿಕೆಯಲ್ಲಿ ಈತ ತೊಡಗಿಸಿಕೊಳ್ಳುತ್ತಿದ್ದನು ಎಂದು‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಲಿಫ್ಟ್​ನಲ್ಲೇ ಪತ್ನಿಗೆ ತಲಾಕ್ ನೀಡಿ ಮನೆಯಿಂದ ಹೊರಹಾಕಿದ ಪತಿರಾಯ!

ABOUT THE AUTHOR

...view details