ಬೆಂಗಳೂರು :ರಾಜ್ಯದಲ್ಲಿ ಇಂದು ದಾಖಲೆ ಮೀರಿ 9894 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಸೆಪ್ಟೆಂಬರ್ 2 ರಂದು 9860 ಅತೀ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿತ್ತು. ಇಂದು ತನ್ನದೆ ದಾಖಲೆ ಮುರಿದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,59,445ಕ್ಕೆ ಏರಿಕೆ ಆಗಿದೆ. ಇತ್ತ 8,402 ಮಂದಿ ಗುಣಮುಖರಾಗಿದ್ದು, ಒಟ್ಟು 3,52,958 ಡಿಸ್ಜಾರ್ಜ್ ಆದಂತಾಗಿದೆ.
ಇಂದು 104 ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ 7265ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 67,955 ಕೊರೊನಾ ಪರೀಕ್ಷೆ ಮಾಡಿಸಿದ್ದು, ರಾಜ್ಯದಲ್ಲಿ 99,203 ಸಕ್ರಿಯ ಪ್ರಕರಣಗಳಿವೆ. ಬರೋಬ್ಬರಿ 807 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5,13,883 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.