ಬೆಂಗಳೂರು: 2019ರ ಮುಂಗಾರು ಋತುವಿನಲ್ಲಿ 18 ಜಿಲ್ಲೆಗಳಲ್ಲಿನ 49 ತಾಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ವರದಿ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಯಾವ ಜಿಲ್ಲೆಯ ಯಾವ ತಾಲೂಕುಗಳು ಬರಪೀಡಿತ?
- ಬೆಂ.ನಗರ - ಆನೇಕಲ್, ಬೆಂ.ಉತ್ತರ ಹಾಗೂ ಬೆಂ.ಪೂರ್ವ ತಾಲೂಕು
- ಬೆಂ.ಗ್ರಾಮಾಂತರ - ದೇವನಹಳ್ಳಿ, ಹೊಸಕೋಟೆ, ನೆಲಮಂಗಲ
- ರಾಮನಗರ - ಕನಕಪುರ, ರಾಮನಗರ
- ಕೋಲಾರ - ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ
- ಚಿಕ್ಕಬಳ್ಳಾಪುರ - ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ
- ತುಮಕೂರು - ಗುಬ್ಬಿ,ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ
- ಚಿತ್ರದುರ್ಗ - ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು
- ದಾವಣಗೆರೆ - ಜಗಳೂರು
- ಚಾಮರಾಜನಗರ - ಕೊಳ್ಳೇಗಾಲ
- ಬಳ್ಳಾರಿ - ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ
- ಕೊಪ್ಪಳ - ಗಂಗಾವತಿ
- ರಾಯಚೂರು - ಮಾನ್ವಿ, ರಾಯಚೂರು, ಸಿಂಧನೂರು
- ಕಲಬುರಗಿ - ಚಿಂಚೋಳಿ, ಜೇವರ್ಗಿ, ಸೇಡಂ
- ಯಾದಗಿರಿ - ಯಾದಗಿರಿ
- ಬೆಳಗಾವಿ - ಅಥಣಿ
- ಬಾಗಲಕೋಟೆ - ಬಾದಾಮಿ, ಬೀಳಗಿ, ಜಮಖಂಡಿ
- ವಿಜಯಪುರ - ಬಸವನಬಾಗೇವಾಡಿ, ವಿಜಯಪುರ, ಇಂಡಿ, ಸಿಂಧಗಿ
- ಗದಗ - ನರಗುಂದ