ಕರ್ನಾಟಕ

karnataka

ETV Bharat / city

ಹೊಸ ಕೈದಿಗಳಿಗೂ ಸಹ ಇನ್ಮುಂದೆ 14 ದಿನ ಕ್ವಾರಂಟೈನ್ ಕಡ್ಡಾಯ? - ಪರಪ್ಪನ ಅಗ್ರಹಾರ

ಇನ್ನು ಮುಂದೆ ಹೊಸದಾಗಿ ಕೊಲೆ, ಸುಲಿಗೆ, ಡಕಾಯಿತಿ ಹೀಗೆ ನಾನಾ ಕೃತ್ಯಗಳನ್ನು ಮಾಡಿ ಬರುವ ಕೈದಿಗಳನ್ನು 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸುವ ಕುರಿತು ಕೇಂದ್ರ ಕಾರಾಗೃಹ ನಿರ್ಧಾರ ಮಾಡಿದ್ದು, ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ.

Jail
ಜೈಲು

By

Published : May 28, 2020, 3:16 PM IST

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರೋಬ್ಬರಿ ಐದು ಸಾವಿರ ಕೈದಿಗಳಿದ್ದು, ಇನ್ಮುಂದೆ ಹೊಸದಾಗಿ ಬರುವ ಕೈದಿಗಳಿಗೆ 14 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಲು ಕೇಂದ್ರ ಕಾರಾಗೃಹ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗ್ತಿದೆ.

ಕೊಲೆ, ಸುಲಿಗೆ, ಡಕಾಯಿತಿ ಹೀಗೆ ನಾನಾ ಕೃತ್ಯಗಳನ್ನು ಮಾಡಿ ಬರುವ ಕೈದಿಯನ್ನ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ನಂತರ ಕೋವಿಡ್-19 ಪರೀಕ್ಷೆ ನಡೆಸಿ ಒಂದು ವೇಳೆ ಸೋಂಕು ಇಲ್ಲವೆಂದು ತಿಳಿದು ಬಂದರೆ ಮಾತ್ರ ಇತರೆ ಕೈದಿಗಳ ಜೊತೆ ಇರಿಸಲಾಗುತ್ತದೆ. ಸೋಂಕು ಪತ್ತೆಯಾದರೆ ನೇರವಾಗಿ ಸಂಬಂಧಿಸಿದ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಸದ್ಯ ಪೊಲೀಸ್ ಠಾಣೆಯಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಆದರೂ ಕೂಡ ಹೊಸ ಕೈದಿಗಳನ್ನು ನಿಭಾಯಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ಪರಪ್ಪನ ಅಗ್ರಹಾರದಲ್ಲಿ 5 ಸಾವಿರ ಕೈದಿಗಳಿದ್ದಾರೆ. ಅಧಿಕಾರಿಗಳ ವರದಿ ಪ್ರಕಾರ, ಕಳೆದ ಒಂದು ತಿಂಗಳಿನಲ್ಲಿ 122 ಮಂದಿ ಹೊಸ ಕೈದಿಗಳು ಆಗಮಿಸಿದ್ದಾರೆ. ಮಹಿಳಾ ಕಾರಾಗೃಹದ ಪಕ್ಕ ಇರುವ ಬ್ಯಾರಕ್​ನಲ್ಲಿ 122 ಮಂದಿಯನ್ನು ಇರಿಸಲಾಗಿದೆ. ಕೊರೊನಾ ಹಿನ್ನೆಲೆ ಅವರನ್ನು ನೇರವಾಗಿ ಜೈಲಿಗೆ ಹಾಕಲು ಆಗುವುದಿಲ್ಲ. ಸದ್ಯ ಬ್ಯಾರಕ್​ನಲ್ಲಿ ಹಾಕಿದ ಕೈದಿಗಳಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟರೂ ಸಹ ಕಷ್ಟ ಆಗುವ ಹಿನ್ನೆಲೆ ಅಧಿಕಾರಿಗಳು ಗೃಹ ಇಲಾಖೆಗೆ ತಿಳಿಸಿದ್ದಾರೆ. ಸದ್ಯಕ್ಕೆ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧರಿಸುವ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಒಟ್ಟು 61 ಕಾರಾಗೃಹಗಳಿವೆ. ಈ ಕಾರಾಗೃಹದಲ್ಲಿ ಈವರೆಗೆ 15,150 ಕೈದಿಗಳಿದ್ದಾರೆ. ಇನ್ನು ಕೇವಲ 14 ಸಾವಿರ ಕೈದಿಗಳನ್ನು ಇರಿಸಲು ಮಾತ್ರ ಸ್ಥಳಾವಕಾಶವಿದೆ. ಈ ನಡುವೆ ಕೊರೊನಾ ಬಿಕ್ಕಟ್ಟು ಎದುರಾಗಿದ್ದು, ಕಾರಾಗೃಹಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗೆಯೇ ಉತ್ತಮ ವರ್ತನೆ ಆಧಾರದ ಮೇಲೆ ಕೈದಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ಇಲಾಖೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಸಂಬಂಧಿಕರು ಕೈದಿಗಳನ್ನು ಭೇಟಿ ಮಾಡುವುದಕ್ಕೆ ಇಲಾಖೆ 2 ತಿಂಗಳು ಕಾಲ ಬ್ರೇಕ್​ ಹಾಕಿದೆ.

ABOUT THE AUTHOR

...view details