ಬಳ್ಳಾರಿ: ರಂಜಾನ್ ಆಚರಣೆಯನ್ನ ಮನೆಯಲ್ಲಿಯೇ ಆಚರಿಸಿ ಎಂದು ಡಿವೈಎಸ್ಪಿ ಕೆ.ರಾಮರಾವ್ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಮನೆಯಲ್ಲಿಯೇ ರಂಜಾನ್ ಆಚರಿಸಿ..ಮುಸ್ಲಿಂ ಬಾಂಧವರಲ್ಲಿ ಡಿವೈಎಸ್ಪಿ ಕೆ.ರಾಮರಾವ್ ಮನವಿ - ಬಳ್ಳಾರಿ ಸುದ್ದಿ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಸಂಬಂಧ ಕರೆದಿದ್ದ ಶಾಂತಿ ಸಭೆಯಲ್ಲಿ ಬಳ್ಳಾರಿ ಡಿವೈಎಸ್ಪಿ ಕೆ.ರಾಮರಾವ್ ಮಾತನಾಡಿ, ರಂಜಾನ್ ಆಚರಣೆಯನ್ನ ಮನೆಯಲ್ಲಿಯೇ ಆಚರಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಸಂಬಂಧ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಭೀತಿ ಹಿನ್ನಲೆ,ಈ ಬಾರಿ ರಂಜಾನ್ ಆಚರಣೆ ವೇಳೆ ಸಾಮೂಹಿಕ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ನಮಾಜ್ಗೆ ಅವಕಾಶವಿಲ್ಲ. ಅವರವರ ಮನೆಗಳಲ್ಲೇ ಹಬ್ಬ ಆಚರಣೆ ಮಾಡಿ,ಸರ್ಕಾರ ಜಾರಿ ಮಾಡಿರುವ ಕಾನೂನುಗಳನ್ನ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕು. ಕೊರೊನಾ ವೈರಸ್ ಸದ್ಯ ಅಪಾಯಕಾರಿಯಾಗಿದೆ. ಸದ್ಯ ಯಾವುದೇ ರೀತಿಯ ಬಹಿರಂಗ ಆಚರಣೆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಈ ಸಂಬಂಧ ಸರ್ಕಾರದಿಂದ ಬರುವ ಮಾರ್ಗಸೂಚಿಗಳನ್ನು ತಮ್ಮ ಗಮನಕ್ಕೆ ತರಲಾಗುತ್ತದೆ ಎಂದರು.
ಬಳ್ಳಾರಿ ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ರೋಗ. ಹೀಗಾಗಿ ರಂಜಾನ್ ಹಬ್ಬವನ್ನ ತಮ್ಮ ಮನೆಗಳಲ್ಲಿ ಆಚರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೊರ ಬರಬೇಡಿ. ರೋಗವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಿಸಬೇಕೇ ಹೊರತು, ಬೇರೆ ಯಾವುದು ಔಷಧಿ ಇಲ್ಲ. ತಮ್ಮ ಕುಟುಂಬದ ಉಳಿವಿಗಾಗಿ ಸರ್ಕಾರದ ನಿಯಮ ಪಾಲನೆ ಮಾಡಿ ಎಂದರು.