ಕರ್ನಾಟಕ

karnataka

ETV Bharat / city

ಕಲಾ ವಿಭಾಗದಲ್ಲಿ ಕೊಟ್ಟೂರು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ಫಸ್ಟ್ ರ‍್ಯಾಂಕ್: 5ನೇ ವರ್ಷವೂ ಟಾಪರ್ಸ್ ಕೊಟ್ಟ ಕಾಲೇಜ್

ಪಿಯುಸಿ ಫಲಿತಾಂಶ ಪ್ರಕಟ: ವಿಜಯನಗರ ಜಿಲ್ಲೆಯ ಕೊಟ್ಟೂರಿನ 'ಇಂದು' ಪಿಯು ಕಾಲೇಜು ಈ ಬಾರಿಯೂ ಕಲಾ ವಿಭಾಗದಲ್ಲಿ ಟಾಪರ್ ಆಗಿದೆ. ಈ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಶ್ರೇಯಾಂಕದಲ್ಲಿ ಪಾಸ್ ಆಗಿದ್ದಾರೆ.

pcs result
ಪಿಯುಸಿ ಫಲಿತಾಂಶ

By

Published : Jun 18, 2022, 1:16 PM IST

ವಿಜಯನಗರ/ಹುಬ್ಬಳ್ಳಿ:ದ್ವಿತೀಯ ಪಿಯುಸಿ 2021-22ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನ 'ಇಂದು' ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಶ್ವೇತಾ ಭೀಮಾಶಂಕರ ಭೈರಗೊಂಡ, ಸಹನಾ ಮಡಿವಾಳರ ಈ ಇಬ್ಬರೂ ವಿದ್ಯಾಥಿಗಳು 600 ಅಂಕಗಳಿಗೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಇದೇ ಕಾಲೇಜಿನ ಜಿ ಮೌನೇಶ್ 593, ಸಮೀರ್ 591, ಶಾಂತಾ ಜಿ 591, ಕಾವೇರಿ ಜಗ್ಗಲ್ 591 ಅಂಕಗಳನ್ನು ಪಡೆದಿದ್ದಾರೆ. ಕೊಟ್ಟೂರಿನ ಇಂದು ಪಿಯು ಕಾಲೇಜು ಕಲಾ ವಿಭಾಗದಲ್ಲಿ ಸತತ 5 ವರ್ಷಗಳಿಂದ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುತ್ತ ಬಂದಿರುವುದು ಗಮನಾರ್ಹ. ಈ ಬಾರಿಯೂ ಕೂಡ ಕಲಾ ವಿಭಾಗದಲ್ಲಿ ಇಂದು ಕಾಲೇಜ್ ಟಾಪರ್ ಆಗಿದೆ.

ಟಾಪರ್ಸ್ ಪಟ್ಟಿ

ಇನ್ನು ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಕಾಲೇಜಿನ ವಿದ್ಯಾರ್ಥಿನಿ ಸಾನಿಕಾ ಗುಂಡೂರಾವ್ ರಾಜ್ಯಕ್ಕೆ ತೃತೀಯ ರ್ಯಾಂಕ್ ಪಡೆದಿದ್ದಾರೆ. ಸಾನಿಕಾ 600 ಅಂಕಕ್ಕೆ 593 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜು ಹಾಗೂ ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ‌.

ಸಾನಿಕಾ ಗುಂಡೂರಾವ್

(ಇದನ್ನೂ ಓದಿ:ಪಿಯು ಫಲಿತಾಂಶ ಪ್ರಕಟ: ಗಣಿತದಲ್ಲಿ14 ಸಾವಿರ ವಿದ್ಯಾರ್ಥಿಗಳಿಂದ ಶತಕ ಸಾಧನೆ, ಈ ಬಾರಿ ಶೂನ್ಯ ಫಲಿತಾಂಶಕ್ಕೆ ಬ್ರೇಕ್​)

ABOUT THE AUTHOR

...view details