ಬಳ್ಳಾರಿ: ರಾಜ್ಯವ್ಯಾಪಿ ಎಪಿಎಂಸಿ ಶುಲ್ಕ ಏರಿಕೆ ಮಾಡಿರುವುದನ್ನು ಖಂಡಿಸಿ ಗಣಿನಾಡಿನ ವರ್ತಕರು, ದಲ್ಲಾಳಿಗಳು ಎಪಿಎಂಸಿ ಮಾರುಕಟ್ಟೆಯನ್ನು ಒಂದು ದಿನ ಮಟ್ಟಿಗೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸೆಸ್ ಏರಿಕೆಗೆ ಖಂಡನೆ: ಗಣಿನಾಡಿನಲ್ಲಿ ಎಪಿಎಂಸಿ ವಹಿವಾಟು ಬಂದ್
ರಾಜ್ಯ ಸರ್ಕಾರ ಶೇ.0.35 ರಷ್ಟಿದ್ದ ಸೆಸ್ ಅನ್ನು 1 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿರುವುದನ್ನು ಖಂಡಿಸಿ ವರ್ತಕರು, ದಲ್ಲಾಳಿಗಳು ಒಂದು ದಿನದ ಮಟ್ಟಿಗೆ ಬಳ್ಳಾರಿ ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಶೇ.0.35 ರಷ್ಟಿದ್ದ ಸೆಸ್ ಅನ್ನು ಮೊನ್ನೆಯಷ್ಟೇ ಶೇಕಡಾ 1 ರೂ.ಗೆ ಏರಿಸಿ ಆದೇಶ ಹೊರಡಿಸಿತ್ತು. ಇದನ್ನು ಖಂಡಿಸಿ ವರ್ತಕರು, ದಲ್ಲಾಳ್ಳಿಗಳು ಒಂದು ದಿನದ ಮಟ್ಟಿಗೆ ವ್ಯಾಪಾರ ವಹಿವಾಟನ್ನು ನಡೆಸದೆ ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಏಕಾಏಕಿ ಶುಲ್ಕವನ್ನು ಸರಿಸುಮಾರು ಮೂರು ಪಟ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ರೈತರಿಗೆ ಹೆಚ್ಚಿನ ಹೊರೆ ಬೀಳಲಿದೆ. ಶುಲ್ಕವನ್ನು ವರ್ತಕರು, ದಲ್ಲಾಳಿಗಳು ಕಟ್ಟಿದರು. ಅದನ್ನು ರೈತರಿಂದಲೇ ವಸೂಲಿ ಮಾಡಲಾಗುತ್ತಿದೆ. ಇದರಿಂದಾಗಿ ನೇರವಾಗಿ ರೈತರಿಗೆ ಹೆಚ್ಚಿನ ಹೊರೆ ಬೀಳುತ್ತದೆ ಎಂದರು.