ಕರ್ನಾಟಕ

karnataka

ETV Bharat / city

ಮುಖ್ಯಮಂತ್ರಿ ರಾಜೀನಾಮೆ ವಿಚಾರ: ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಈಶ್ವರಪ್ಪ! - ಬಳ್ಳಾರಿ ಲೇಟೆಸ್ಟ್​ ನ್ಯೂಸ್

ಸಿಎಂ ರಾಜೀನಾಮೆ ವಿಚಾರವಾಗಿ ಕುರಿತು ಪ್ರತಿಕ್ರಿಯಿಸಲಾರೆ. ಸಿಎಂ ಬಿಎಸ್​ವೈ ಅವರ ರಾಜೀನಾಮೆ ವಿಚಾರ ಮುಗಿದು ಹೋದ ಕಥೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Bellary
ಸಚಿವ ಕೆ.ಎಸ್.ಈಶ್ವರಪ್ಪ ಸಚಿವ ಕೆ.ಎಸ್.ಈಶ್ವರಪ್ಪ

By

Published : Jun 7, 2021, 1:24 PM IST

ಬಳ್ಳಾರಿ:ಸಿಎಂ ಯಡಿಯೂರಪ್ಪನವರ ರಾಜೀನಾಮೆ ವಿಚಾರವಾಗಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮದವರ ವಿರುದ್ಧವೇ ಗರಂ ಆದರು.

ಮುಖ್ಯಮಂತ್ರಿ ರಾಜೀನಾಮೆ ವಿಚಾರ: ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಈಶ್ವರಪ್ಪ

ಜಿಲ್ಲಾ ಕ್ರೀಡಾಂಗಣದಲ್ಲಿಂದು ಕಸ ವಿಲೇವಾರಿ ವಾಹನಗಳಿಗೆ ಚಾಲನೆ ನೀಡಿದರು. ಬಳಿಕ ಸಿಎಂ ರಾಜೀನಾಮೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಗರಂ ಆದ ಅವರು, ಬಿಡಪ್ಪ ಅದನ್ನ ಏನ್ ಕೇಳುತ್ತೀಯಾ ಅಂತ ಪ್ರತಿಕ್ರಿಯಿಸದೇ ಹೊರಟು ಹೋದರು.

ನೀವು ಅದನ್ನೇ ಕೇಳ್ತಿರಾ ಅಂತಾನೆ ನಾನು ಇಲಾಖೆ ವಿಚಾರವಷ್ಟೇ ಪ್ರಸ್ತಾಪಿಸಿದ್ದೆ. ಆದರೆ, ನೀವು ಮತ್ತದೇ ಕೇಳುತ್ತಿದ್ದೀರಿ. ಪದೇ ಪದೇ ಅದನ್ನೇ ರಿಪೀಟ್ ಮಾಡ್ತೀರಿ. ನಾನಂತೂ ಆ ಕುರಿತು ಪ್ರತಿಕ್ರಿಯಿಸಲಾರೆ. ಸಿಎಂ ಬಿಎಸ್​ವೈ ಅವರ ರಾಜೀನಾಮೆ ವಿಚಾರ ಮುಗಿದು ಹೋದ ಕಥೆ ಎಂದರು.

ಇದನ್ನೂ ಓದಿ:ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ, ನಾವೆಲ್ಲ ಬಿಎಸ್​​ವೈ ಜೊತೆಗಿದ್ದೇವೆ: ರೇಣುಕಾಚಾರ್ಯ

ABOUT THE AUTHOR

...view details