ಬಳ್ಳಾರಿ: ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ವಿಚಾರ ಕುರಿತು ಗುರುವಾರ ಸಿಎಂ ಬಿ.ಎಸ್ ಯಡಿಯೂರಪ್ಪ ಬಳಿ ಹೋಗಿದ್ದ ನಿಯೋಗವನ್ನು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಅದೊಂದು ಸ್ವಾರ್ಥಿಗಳ ಕೂಟವೆಂದು ಜರಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗಾಲಿ ಸೋಮಶೇಖರ ರೆಡ್ಡಿ ನಗರದ ನಾನಾ ಕಾಲೊನಿಯಲ್ಲಿ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿರು. ಆ ನಿಯೋಗದಲ್ಲಿರುವ ಎಲ್ಲರೂ ಕೂಡ ಸ್ವಾರ್ಥಿಗಳೇ, ತಮ್ಮ ಸ್ವಹಿತಾಸಕ್ತಿಗೋಸ್ಕರ ಜಿಲ್ಲೆಯ ಇಬ್ಭಾಗಕ್ಕೆ ಮುಂದಾಗಿರೋದು ಖಂಡನೀಯ ಎಂದರು.
ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಹೊರಸಿರುವುದಕ್ಕೆ ನನ್ನ ವಿರೋಧವಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಪುನರ್ ಪರಿಶೀಲಿಸಬೇಕು. ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡೋದು ಸರಿಯಲ್ಲ. ಇದು ತುಘಲಕ್ ರೀತಿಯ ವರ್ತನೆ. ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನಾಟಕ ರಾಜ್ಯದ ಬೆಳಗಾವಿ ಅತಿದೊಡ್ಡ ಜಿಲ್ಲೆಗಳಿಲ್ಲವೇ?. ಸಚಿವ ಶ್ರೀರಾಮುಲು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಶ್ರೀ ರಾಮುಲು ಇರುತ್ತಾರೆ ಎಂದು ಹೇಳಿದರು.
ಇನ್ನು, ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ವಿಸ್ತರಿಸಲು ಸಾಧ್ಯವಾಗದು. ಈ ಬಗ್ಗೆ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಬಳ್ಳಾರಿಗೆ ವಿಜಯನಗರದ ಹೆಸರನ್ನು ಇಡಿ. ಅದು ಬಿಟ್ಟು ನೂತನ ಜಿಲ್ಲೆಯನ್ನಾಗಿ ವಿಜಯನಗರ ಕ್ಷೇತ್ರವನ್ನು ಬದಲಿಸೋದು ಬೇಡ ಎಂದರು.