ಬಳ್ಳಾರಿ:ಸಮಿಶ್ರ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಅಸ್ತಿತ್ವಕ್ಕೆ ಬಂದ್ರೂ ಗಣಿನಾಡಿನ ಗ್ರಾಮಾಂತರ ಪ್ರದೇಶದಲ್ಲಿ ತಿಂಗಳ ತಿರುಳು ಬ್ಯಾನರ್ ಮಾತ್ರ ಇನ್ನೂ ಬದಲಾಗಿಲ್ಲ. ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಸರ್ಕಾರ ಬದಲಾದ್ರೂ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯ 'ತಿರುಳು' ಬದಲಾಗಿಲ್ಲ.. ಯಾಕಂತೀರಾ, ಇಲ್ನೋಡಿ.. - ಗಣಿನಾಡು ಗ್ರಾಮಾಂತರ ಪ್ರದೇಶ
ಸಮಿಶ್ರ ಸರ್ಕಾರ ಬದಲಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೂ ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ತಿಂಗಳ ತಿರುಳು ಬ್ಯಾನರ್ ಬದಲಾಗಿಲ್ಲ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

ನಗರದ ರೇಡಿಯೋ ಪಾರ್ಕ್ನ ಡಯಟ್ ಕಾಲೇಜ್ ಆವರಣದಲ್ಲಿ ಶಿಕ್ಷಣ ಇಲಾಖೆಯಲ್ಲಿ ಜೂನ್ನಿಂದ ಇದ್ದ ತಿಂಗಳ ತಿರುಳು ಬ್ಯಾನರ್ ಇನ್ನೂ ಬದಲಿಸಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ನಾಲ್ಕು ತಿಂಗಳು ಕಳೆದರೂ ಸಹ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರದ ಜೂನ್ ತಿಂಗಳ ತಿರುಳು ಬ್ಯಾನರ್ನಲ್ಲಿ ಹೆಚ್‌ಡಿಕೆ ಮತ್ತು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರ ಭಾವಚಿತ್ರವಿರುವ ಬ್ಯಾನರ್ ಹಾಗೇ ಬಿಡಲಾಗಿದೆ.
ಡಯಟ್ ಕಾಲೇಜ್ ಅಂದ್ರೇ ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆ. ಆದರೆ, ಶಿಕ್ಷಣ ಸಂಸ್ಥೆಯ ಶಿಕ್ಷಕರ ತರಬೇತಿ ನೀಡುವ ಅಧಿಕಾರಿಗಳಿಗೆ ಈ ತಿಂಗಳ ತಿರುಳು ಬದಲಿಸುವ ಬಗ್ಗೆ ಆಲೋಚನೆಯೇ ಬರಲಿಲ್ಲವೇ.. ಇದಕ್ಕೆ ಸಂಬಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ತಿಂಗಳ ತಿರುಳು ಬ್ಯಾನರ್ ಬದಲಿಸಬೇಕಾಗಿದೆ.