ಬಳ್ಳಾರಿ: ಮಹಾಮಾರಿ ಕೊರೊನಾ ಸಂಕಷ್ಟದಿಂದ ಹೊರಬರುತ್ತಿರುವ ಜನರು ದಸರಾ ಹಬ್ಬವನ್ನು ಸಂಭ್ರದಿಂದ ಆಚರಿಸಿಕೊಳ್ಳಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಹೂ, ಹಣ್ಣು ಖರೀದಿ ಜೊತೆಗೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ಕಂಡು ಬಂತು. ದರಗಳು ದುಪ್ಪಟ್ಟಾಗಿದ್ದರೂ ಜನರು ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ.
ಗಣಿನಾಡಲ್ಲಿ ದಸರಾ ಸಂಭ್ರಮ.....ದರ ದುಪ್ಪಟ್ಟಾದರೂ ಖರೀದಿ ಬಲು ಜೋರು - dasara 2021
ದಸರಾ ಸಂಭ್ರಮ ಹಿನ್ನೆಲೆ ನಗರದಲ್ಲಿ ಹೂ, ಹಣ್ಣು ಖರೀದಿ ಜೊತೆಗೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ಕಂಡು ಬಂತು. ದರಗಳು ದುಪ್ಪಟ್ಟಾಗಿದ್ದರೂ ಖರೀದಿ ಜೋರಾಗಿಯೇ ಇತ್ತು.
ಗಣಿನಾಡಿನಲ್ಲಿ ದಸರಾ ಸಂಭ್ರಮ.....ದರ ದುಪ್ಪಟ್ಟಾದರೂ ಖರೀದಿ ಜೋರು
1 ಕೆ.ಜಿ ಸೇಬು - 230 ರೂ., 1 ಕೆ.ಜಿ ಬಾಳೆಹಣ್ಣಿಗೆ 43 ರೂ., ಒಂದು ಜೊತೆ ಬಾಳೆ ಕಂಬಕ್ಕೆ 100 ರೂ., 1 ಕೆ.ಜಿ ಚೆಂಡುಹೂಗೆ - 150 ರೂ. ನಿಗದಿಗೊಳಿಸಲಾಗಿದೆ. ಕಳೆದ ವರ್ಷ ಕೊರೊನಾ ಹಿನ್ನೆಲೆ ಹಬ್ಬ ಆಚರಣೆಗೆ ಮಂಕು ಕವಿದಿತ್ತು. ಆದರೆ ಇಂದು ವಾಹನಗಳ ಪೂಜೆ ಜೊತೆಗೆ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳಿಗೆ ಪೂಜೆ ಮಾಡಿ ಸಂಭ್ರಮಿಸಿದರು. ಹೊಸಪೇಟೆ ನಗರದಲ್ಲಿಯೂ ಹೂ, ಹಣ್ಣು ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.
ಇದನ್ನೂ ಓದಿ:ಪಕ್ಷಿಗಳಿಗಾಗಿಯೇ 2 ಎಕರೆ ಭೂಮಿ ಮೀಸಲಿಟ್ಟ ಪಕ್ಷಿ ಪ್ರೇಮಿಗಳು.. ಬಂಟ್ವಾಳದ ದಂಪತಿಯಿಂದ ನಿರಂತರ ಜಾಗೃತಿ