ಕರ್ನಾಟಕ

karnataka

ETV Bharat / city

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ.. ಕವನ ವಾಚನದ ಮೂಲಕ ಪ್ರಸ್ತುತ ರಾಜಕೀಯ ಸ್ಥಿತಿ ವಿಡಂಬನೆ! - undefined

ಗಣಿನಾಡಿನ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕವಿ, ಕಾವ್ಯ, ಗಾಯನ, ಕುಂಚದಲ್ಲಿ ಕುರ್ಚಿಗಾಗಿ ರಾಜಕೀಯ ವ್ಯಕ್ತಿಗಳು ಏನೆಲ್ಲಾ ಮಾಡತ್ತಾರೆ ಎಂದು  ಬಳ್ಳಾರಿ ವೆಂಕಟೇಶ ಉಪ್ಪಾರ ಎಂಬುವರು ಕವನ ವಾಚನ ಮಾಡಿದರು‌‌‌.

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ

By

Published : Jul 13, 2019, 11:29 PM IST

ಬಳ್ಳಾರಿ: ಗಣಿನಾಡಿನ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕವಿ, ಕಾವ್ಯ,ಗಾಯನ, ಕುಂಚದಲ್ಲಿ ಕುರ್ಚಿಗಾಗಿ ರಾಜಕೀಯ ವ್ಯಕ್ತಿಗಳು ಏನೆಲ್ಲಾ ಮಾಡತ್ತಾರೆ ಎಂದು ಬಳ್ಳಾರಿ ವೆಂಕಟೇಶ ಉಪ್ಪಾರ ಎಂಬುವರು ಕವನ ವಾಚನ ಮಾಡಿದರು‌‌‌.

ಗಣಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ

ನಗರದ ಕಮ್ಮ ಭವನದಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಕವಿ, ಕಾವ್ಯ, ಗಾಯನ, ಕುಂಚ ಕಾರ್ಯಕ್ರಮದಲ್ಲಿ ವೆಂಕಟೇಶ ಉಪ್ಪಾರ ಅವರ ಓಡು ಓಡು ಓಡಲೇ ತಮ್ಮ ಎನ್ನುವ ಕವನ ವಾಚನ ಮಾಡಿದರೇ, ಅದಕ್ಕೆ ದೊಡ್ಡಬಸವ ಗವಾಯಿ ಅವರು ಹಾಡಿದರು. ಕುಂಚವನ್ನು ನಾಗೇಶ್ ರಚನೆ ಮಾಡಿದ್ದು, ಈ ಕವನ ವಾಚನ, ಗಾಯನ, ಕುಂಚದಲ್ಲಿ ಪ್ರಸ್ತುತ ಸಮ್ಮಿಶ್ರ ರಾಜಕೀಯದ ಪರಿಸ್ಥಿತಿ ಬಗ್ಗೆ ಮಾಹಿತಿ ಬಿತ್ತರಿಸಿದರು.

ಕವನ ಹೀಗಿದೆ.. :

ಓಡು ಓಡು ಓಡಲೇ ತಮ್ಮ

100 ಮೀಟರ್ ಓಡಲೇ

.. 5000 ಮೀಟರ್ ಓಡಲೇ,

ಎದ್ದು ಬಿದ್ದು ಓಡಲೇ..

ಸೀಟಿಗಾಗಿ ಓಡಲೇ, ಗಂಟಿಗಾಗಿ ಓಡಲೇ..

ಟೈಮ್ ಆಯ್ತ್, ಬೇಗ ಬೇಗ ಓಡಲೇ

ಕೊಡ್ ಕೊಡ್ ಕೊಡಲೇ, ತಮ್ಮ

ರಾಜೀನಾಮೆ ಕೊಡಲೇ..

ಹತ್ ಹತ್ ಹತ್ತಲೇ

ಜಲ್ದಿ ಬಸ್ ಹತ್ತಲೇ..

ನಡಿ ನಡಿ ನಡಿಲೇ

ರೆಸಾರ್ಟ್‌ಗೆ ಬೇಗ ನಡಿಲೇ..

ಬರ್ರೀ‌ ಬರ್ರೀ ಬರ್ರಲೇ ತಮ್ಮ

ಮಜಾ ಮಾಡೋಣ ಬರ್ರಲೇ..

ಆಡು ಆಡು ಆಡಬೇಕಲೇ

ಕಣ್ಣು ಮುಚ್ಚಾಲೆ ಆಟ ಮಾಡಬೇಕಲೇ,

ನಮ್ದುನಿಮ್ದು ಪವರ್

ಏನಾಂತ ಗೊತ್‌ ಮಾಡಬೇಕಲೇ..

ಸಾಕು ಸಾಕು ಮಾಡಲೇ..
ನಿನ್ನ ಗೇಮ್ ಸಾಕು ಮಾಡಲೇ..

ಜನ ನೋಡಕತ್ತರೆ

ನಿನ್ನ ಮುಂದಾ ಆಪರೇಟರ್ ಮಾಡಿ
ಮನೆಗೆ ಕಳುಸ್ತಾರಲೇ

ಓಡು ಓಡು ಓಡಲೇ..

ಒಲಿಂಪಿಕ್‌ನಲ್ಲಾದರ್ರೂ ಓಡಲೇ..

ಗೆದ್ದೇನೆಂದು ಒಂದು ಪದಕನಾದರೂ

ನಿನ್ನ ಕೊರಳಿಗೆ ಹಾಕ್ಕೊಂಡು ಬಾರಲೇ..______

ಇದೇ ಕಾರ್ಯಕ್ರಮದಲ್ಲಿ ಹುಲಿಕಟ್ಟಿ ಚನ್ನಬಸಪ್ಪ, ದಮ್ಮೂರು ಮಲ್ಲಿಕಾರ್ಜುನ ಸೇರಿ ಮತ್ತಿತರರು ಹಾಜರಿದ್ದರು.

For All Latest Updates

TAGGED:

ABOUT THE AUTHOR

...view details